ವಿದೇಶ

ಸೌದಿ ಅರೇಬಿಯಾದ ಒಯಾಸಿಸ್ನಲ್ಲಿ 4,000 ವರ್ಷ ಹಳೆಯ ಪುರಾತನ ಪಟ್ಟಣ ಪತ್ತೆ..! ಆಧುನಿಕ ಸಿಟಿಯನ್ನೇ ಮೀರಿಸುಂತಿದೆ ನೋಡಿ..!

ವಾಯವ್ಯ ಸೌದಿ ಅರೇಬಿಯಾದ ಸುಂದರವಾದ ಓಯಸಿಸ್ನಲ್ಲಿ 4,000 ವರ್ಷಗಳಷ್ಟು ಹಳೆಯದಾದ ಕೋಟೆ ಪಟ್ಟಣದ ಅವಶೇಷಗಳನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

ಪುರಾತತ್ವಶಾಸ್ತ್ರಜ್ಞರು ಆಗಾಗ ನಮ್ಮ ಐತಿಹಾಸಿಕ ಪಳೆಯುಳಿಕೆಗಳು, ಸ್ಮರಖಗಳು, ಕಟ್ಟಡಗಳನ್ನ ಉತ್ಖನನ ಮಾಡುತ್ತಲೇ ಇರುತ್ತಾರೆ. ಇತಿಹಾಸ ಚರಿತ್ರೆಗೆ ಸಂಬಂಧಿಸಿದ ಅದೆಷ್ಟೋ ಕುರುಹುಗಳು ಭೂಗತವಾಗಿದ್ದು, ಆಗಾಗ ಮಾನವನ ಜಗತ್ತಿನ ಮುಂದೆ ಪ್ರತ್ಯಕ್ಷಗೊಂಡು ತಲೆಮಾರುಗಳ ನೆನಪುಗಳನ್ನ ಮರುಕಳಿಸುತ್ತವೆ. ಇದಕ್ಕೆ ಸಾಕ್ಷಿ ಎಂದಂತೆ ವಾಯವ್ಯ ಸೌದಿ ಅರೇಬಿಯಾದ ಸುಂದರವಾದ ಓಯಸಿಸ್ನಲ್ಲಿ 4,000 ವರ್ಷಗಳಷ್ಟು ಹಳೆಯದಾದ ಕೋಟೆ ಪಟ್ಟಣದ ಅವಶೇಷಗಳನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

ಹೌದು,  ಈ ಅವಶೇಷಗಳಿಂದ ಪ್ರಾಚೀನ ಜನರು ಅಲೆಮಾರಿ ಜೀವನಶೈಲಿಯಿಂದ ನಗರ ಜೀವನಶೈಲಿಗೆ ಹೇಗೆ ಪರಿವರ್ತನೆಗೊಂಡರು ಎಂಬುದನ್ನು ಎತ್ತಿ ತೋರಿಸುತ್ತದೆ. ಅಲ್-ನತಾಹ್ ಎಂದು ಕರೆಯಲ್ಪಡುವ ಈ ಸ್ಥಳವು ಒಣ ಮರುಭೂಮಿಯಿಂದ ಆವೃತವಾದ ಸೊಂಪಾದ ಪ್ರದೇಶವಾದ ಖೈಬರ್ನ ಗೋಡೆಯ ಓಯಸಿಸ್ ಒಳಗೆ ಬಹಳ ಹಿಂದಿನಿಂದಲೂ ಅಡಗಿದ್ದು, ನಮ್ಮ ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.
ಫ್ರೆಂಚ್ ಪುರಾತತ್ವಶಾಸ್ತ್ರಜ್ಞ ಗೈಲ್ಯೂಮ್ ಚಾರ್ಲೌಕ್ಸ್ ನೇತೃತ್ವದಲ್ಲಿ 14.5 ಕಿಲೋಮೀಟರ್ ಗೋಡೆಯನ್ನು ಒಳಗೊಂಡ ಆವಿಷ್ಕಾರ ಮಾಡಿಲಾಗಿದೆ.