ಸಿನಿಮಾಗಳು ಜನರ ಮನೋರಂಜನ ಮಾಧ್ಯಮವಾಗಿವೆ. ಕೆಲವೊಂದು ಸಿನಿಮಾಗಳನ್ನ ಬದುಕಿಗೆ ಆದರ್ಶವಾಗಿ ತೆಗೆದುಕೊಂಡರೆ, ಇನ್ನು ಕೆಲವು ಸನಿಮಾಗಳನ್ನ ಜಸ್ಟ್ ನೋಡಿ ಎಂಜಾಯ್ ಮಾಡಬೇಕು ಅಷ್ಟೇ.
ಆದ್ರೆ ನಮ್ಮ ಜನ ಮಾತ್ರ ಒಂದು ಹೆಜ್ಜೆ ಮುಂದೆಹೋಗಿ ಸಿನಿಮಾಗಳನ್ನ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಕೆಲವರು ಸಿನಿಮಾ ಹೋರೋಗಳನ್ನ ರೋಲ್ ಮಾಡೆಲ್‌ಗಳನ್ನಾಗಿಸಿಕಕೊಂಡರೆ, ಇನ್ನೂ ಹಲವರು ಹೀರೋಗಳ ಉತ್ತಮ ಕೆಲಸವನ್ನ ಮೈಗೂಡಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ತಾರೆ. ಆದ್ರೆ, ಇನ್ನೊಂದಿಷ್ಟು ಮಂದಿ ಇರ್ತಾರೆ. ಇವ್ರು ಸಿನಿಮಾಗಳೇ ಸತ್ಯ.. ಸಿನಿಮಾ ನಟ ಹಿಡಿದ ದಾರಿಯಲ್ಲಿ ನಾವೂ ನಡೆದರೆ ನಾವು ಅವನಂತೆಯೇ ಶ್ರೀಮಂತರಾಗ್ತೀವಿ.. ನಮ್ಮ ಜೀವನವೂ ಅದೇ ರೀತಿ ಬದಲಾಗುತ್ತೆ ಎಂದು ಇಲ್ಲದೇ ಇರೋ ಫ್ಯಾಂಟಸಿ ಹಿಂದೆ ಓಡುತ್ತಾರೆ. ಈಗ ಇಂತಹದ್ದೇ ಘಟನೆಯೊಂದು ನಡೆದಿದೆ.
