ಒಂದು ಕಾಲ ಇತ್ತು, ರಣವೀರ್‌ಸಿಂಗ್‌ನ ಬಾಲಿವುಡ್‌ನ VERSATILE ACTOR ಅಂತಾ ಕರೀತಿದ್ರು, ಅದು ಯಾವುದೇ ಆಗಿರಲಿ, ಗಂಭೀರವಾದ ಪಾತ್ರವಾಗಿರಲಿ, ಹಾಸ್ಯಮಯ ಸನ್ನಿವೇಶವಾಗಿರಲಿ, ಅಥವಾ ರೋಮ್ಯಾಂಟಿಕ್‌ರೋಲ್‌ಆಗಿರಲಿ, ಜಲಾಲುದ್ದೀನಿ ಖಿಲ್ಜಿಯಿಂದ ಹಿಡಿದು, ಸೂಪರ್‌ಕಾಪ್‌ಪಾತ್ರವಾಗಿರಲಿ, ರಣವೀರ್‌ಎಲ್ಲಾ ಪಾತ್ರಗಳಿಗೂ ಸೂಟ್ ಆಗ್ತಿದ್ರು..

ಬಾಲಿವುಡ್‌ಮಂದಿ ಮುಂದಿನ ಸೂಪರ್‌ಸ್ಟಾರ್ ರಣವೀರ್‌ಅಂತಾ ಹೇಳ್ತಾ ಇದ್ರು, ಆದ್ರೆ ಈಗ ಇದೇ ರಣವೀರ್‌ಸಿಂಗ್‌ಸಿನಿಮಾಗಳು ಯಾವಾಗ ತೆರೆ ಮೇಲೆ ಬರ್ತೀದೆ..? ಯಾವಾಗ ಹೇಳ ಹೆಸರಿಲ್ಲದಂತೆ ಹೋಗ್ತಿದೆ ಅನ್ನೋದು ಗೊತ್ತೇ ಆಗ್ತಿಲ್ಲ, ಬಾಕ್ಸ್‌ಆಫೀಸ್‌ಗೆಲ್ಲೋದ್ರಲ್ಲಿ ರಣವೀರ್‌ನಿರಂತರವಾಗಿ ಸೋಲುತ್ತಲೇ ಬರ್ತಿದ್ದಾರೆ, 83 ನಂಥಾ ಅಧ್ಭುತ ಚಿತ್ರವಾಗಿರಲಿ, ಜಯೇಶ್‌ಭಾಯ್‌ಜೋರ್‌ದಾರ್‌ಚಿತ್ರವಾಗಿರಲಿ ಅಥವಾ ಸರ್ಕಸ್‌ನಂಥಾ ಎಂಟರ್‌ಟೈನ್ಮೆಂಟ್‌ಚಿತ್ರವಾಗಿರಲಿ, ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಲೇ ಇಲ್ಲ, ಕಲೆಕ್ಷನ್‌ನೋಡಿದ್ರೆ ಅಷ್ಟಕಷ್ಟೇ ಇದರಿಂದ ರಣವೀರ್‌ಸಿಂಗ್‌ಗಾಗಿ ಮೀಸಲಿಟ್ಟ ಕಥೆಗಳೆಲ್ಲಾ ಕ್ಯಾನ್ಸಲ್‌ಆಗ್ತಿವೆ, ಅದಕ್ಕೆ ಕಾರಣ ಪ್ರಡ್ಯೂಸರ್‌ಗಳು ಹಿಂದೇಟು ಹಾಕ್ತಿರೋದು..
