ಬಿಗ್ ಬಾಸ್ ಸ್ಪರ್ಧಿಗಳು 50 ದಿನದ ಆಟ ಮುಗಿಸಿದ್ದಾರೆ, ಇನ್ನು ಉಳಿದಿರೋದು ಕೇವಲ 50 ದಿನ ಮಾತ್ರ, ದಿನದಿಂದ ದಿನಕ್ಕೆ ಸ್ನೇಹಿತರು ದುಷ್ಮನ್ಗಳಾಗುತ್ತಿದ್ದಾರೆ, ದುಷ್ಮನ್ಗಳು ಸ್ನೇಹಿತರಾಗುತ್ತಿದ್ದಾರೆ ಅನ್ನೋದು ಬಿಗ್ ವೇದಿಕೆಯಲ್ಲಿ 50ದಿನಗಳು ಕಳೆದ ಮೇಲೆ ಕಾಣಸಿಗ್ತಿದೆ.. ಈಗಾಗ್ಲೆ ಮೋಕ್ಷಿತಾ, ಮಂಜು ಮತ್ತು ಗೌತಮಿ ಸ್ನೇಹ ಮುರಿದುಕೊಂಡಿದ್ದಾರೆ, ಆದ್ರೆ ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಕೊಡೋದಿಲ್ಲ ಅಂತೇಳಿ ಎಲ್ಲರೂ ಭಾವಿಸಿದ್ದು ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ ಜೋಡಿಯನ್ನ , ಆದ್ರೆ ಈ ಸ್ನೇಹ ಹೆಚ್ಚು ಕಾಲ ಉಳಿದಿಲ್ಲ, ತ್ರಿವಿಕ್ರಮ ಆಡಿದ ಆದೊಂದು ಮಾತು, ಇಬ್ಬರು ಬೇರೆ ಬೇರೆಯಾಗಿದ್ಧಾರೆ..
ಅಷ್ಟಕ್ಕೂ ತ್ರಿವಿಕ್ರಮ ಹೇಳಿದ್ದಾದ್ರೂ ಏನು..? ತ್ರಿವಿಕ್ರಮ, ಉಗ್ರಂ ಮಂಜು ಬಳಿ ಹೋಗಿ ಚೈತ್ರಾ ಡೇಂಜರ್, ಆಕೆ ಆಚೆ ಸಿಕ್ಕಿದ್ರೂ ನಾನು ಮಾತನಾಡಿಸೋದಿಲ್ಲ ಅಂತಾ ಹೇಳಿದ್ರಂತೆ, ಇದೇ ಮಾತನ್ನ ಮಂಜು ಯತಾವತ್ತಾಗಿ ಚೈತ್ರಾ ಬಳಿ ಹೇಳಿದ್ರು, ಇದಕ್ಕೆ ಮೊದಮೊದಲು ಚೈತ್ರಾ ಕೂಡಾ ನಂಬಿರಲಿಲ್ಲ, ಯಾವಾಗ ಇದು ಬಹಿರಂಗ ಚರ್ಚೆಗೆ ಬರತ್ತೋ ಆಗ ಈ ವಿಚಾರ ಹೇಳಿದ್ದು ತ್ರಿವಿಕ್ರಮ್ ಹೇಳಿದ್ದು ಕನ್ಫರ್ಮ್ ಆಗಿತ್ತು, ಇಲ್ಲಿ ಚೈತ್ರಾ ಕೂಡಾ ಇನ್ಮುಂದೆ ನಾನು ತ್ರಿವಿಕ್ರಮ್ ಸ್ನೇಹಿತರಲ್ಲ, ಹೊರಗೆ ಹೋದ್ಮೇಲೆ ಕೂಡಾ ನಾವು ಯಾವತ್ತೂ ಮುಖ ಕೂಡಾ ನೋಡಲ್ಲಅಂತಾ ಹೇಳಿಕೆ ಕೊಟ್ಟಿದ್ದಾರೆ..