ಸ್ಪೆಷಲ್ ಸ್ಟೋರಿ

ಬೀದಿ ನಾಯಿಗಳ ಹಾವಳಿಗೆ ಎರಡೂವರೆ ವರ್ಷದ ಮಗುವಿಗೆ ಗಂಭೀರ ಗಾಯ

ತುಮಕೂರು ಜಿಲ್ಲೆಯಲ್ಲಿ ನಿಲ್ಲದ ಬೀದಿ ನಾಯಿಗಳ ಹಾವಳಿ. ಮನೆ ಮುಂದೆ ಆಟವಾಡುತ್ತಿರುವಾಗ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ದಾಳಿ.

ತುಮಕೂರು ತಾಲೂಕಿನ ಹೆಗ್ಗೆರೆಯಲ್ಲಿ ಘಟನೆ. ಹಲೀಜಾ ಖಾನಂ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ, ಮಗುವಿನ ಕಣ್ಣು ಹಾಗೂ ತಲೆಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ ಬೀದಿ ನಾಯಿಗಳು, ಅಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ ಅನ್ನೋದನ್ನ ನೋಡೋದಾದ್ರೆ, ಈ ಮಗು ಮನೆ ಮುಂದೆ ಆಟವಾಡುತಿತ್ತು ಇದೇ ವೇಳೆ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ದಾಳಿ ಮಾಡಿಬಿಟ್ಟಿದೆ, ಘಟನೆ ಸಂಬಂಧ ಗಾಯಗೊಂಡ ಮಗುವನ್ನ ತುಮಕೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸಲಾಗ್ತಿದೆ.

ಬೀದಿನಾಯಿಗಳ ಹಾವಳಿಗೆ ರೋಸಿಹೋದ ತುಮಕೂರು ಜಿಲ್ಲೆಯ ಹೆಗ್ಗೆರೆ ಗ್ರಾಮಸ್ಥರು. ಶಾಲೆಗೆ ಹೋಗುವಾಗ ಬರುವಾಗ ಹಾಗೂ ಮನೆ ಮುಂದೆ ಆಟವಾಡುವಾಗ ಬೀದಿ ನಾಯಿಗಳ ಹಿಂಡು ಹಿಂಡಾಗಿ ದಾಳಿ ಮಾಡ್ತಿವೆ. ಬೀದಿನಾಯಿಗಳ ಸೆರೆಹಿಡಿಯುವಂತೆ ಹಲವು ಬಾರಿ ಹೆಗ್ಗೆರೆ ಗ್ರಾಪಂ ಮನವಿ ಮಾಡಿದರೂ ತಲೆಕೆಡೆಸಿಕೊಂಡಿಲ್ಲ. ಹೆಗ್ಗೆರೆ ಗ್ರಾಪಂ ಹಾಗೂ ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ
ಬೀದಿ ನಾಯಿಗಳನ್ನ ಸೆರೆ ಹಿಡಿದು ಮಹಿಳೆಯರ ಮಕ್ಕಳನ್ನ ರಕ್ಷಿಸಿ ಎಂದು ಸ್ಥಳೀಯರು ಒತ್ತಾಯ ಮಾಡ್ತಿದ್ದಾರೆ