ಬೆಂಗಳೂರು : ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 82ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಯಡಿಯೂರಪ್ಪನವರ ಕುಟುಂಬದಲ್ಲಿ ಜನ್ಮದಿನದ ಸಂಭ್ರಮ ಜೋರಾಗಿದ್ದು, ಮಕ್ಕಳೆಲ್ಲಾ ಸೇರಿ ಪ್ರೀತಿಯ ತಂದೆಯ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರೋ ಯಡಿಯೂರಪ್ಪ ನಿವಾಸಕ್ಕೆ ವಿಜಯೇಂದ್ರ & ರಾಘವೇಂದ್ರ ಜೊತೆ ಮೂವರು ಹೆಣ್ಣುಮಕ್ಕಳು ಭೇಟಿ ನೀಡಿ ತಂದೆಯ ಆಶೀರ್ವಾದವನ್ನ ಪಡೆದಿದ್ದಾರೆ. ಜೊತೆಗೆ ಯಡಿಯೂರಪ್ಪ ಅವರಿಗೆ ಕೇಕ್ ಕತ್ತರಿಸಿ, ತಂದೆಯ ಜೊತೆ ಕುಟುಂಬ ಸಮೇತರಾಗಿ ಫೋಟೋ ತೆಗೆಸಿಕೊಂಡಿದ್ದಾರೆ.
