ಕರ್ನಾಟಕ

ಸರ್ಕಾರದ ವಿರುದ್ಧ ಸದನದಲ್ಲಿ ಹೊರಾಡಲು ಬಿಜೆಪಿ ಸಿದ್ದತೆ..!

ಇಂದು ಸಂಜೆ ಬಿಜೆಪಿ ಶಾಸಕರ ಸಭೆ ಕರೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು: ಮಾರ್ಚ್‌ 3ನೇ ತಾರೀಖಿನಿಂದ ಅಧಿವೇಶನ ಆರಂಭವಾಗುವ ಹಿನ್ನಲೆ, ಇಂದು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸಮನ್ವಯ ಸಮಿತಿ ಸಭೆ ನಡೆಸಲಿದ್ದಾರೆ. 

ಇಂದು ಸಂಜೆ 5 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ - ಬಿಜೆಪಿ ಶಾಸಕರು & ಎಂಎಲ್‌ಸಿ ಒಟ್ಟಾಗಿ ಹೋರಾಟ ಮಾಡೋ ಬಗ್ಗೆ ಚರ್ಚೆ ಹಾಗೂ ಬಜೆಟ್‌ ಅಧಿವೇಶನಕ್ಕೆ ತಯಾರಿ ನಡೆಸಲಿದ್ದಾರೆ. ಜೊತೆಗೆ ಬಿಬಿಎಂಪಿ ಚುನಾವಣೆ ತಯಾರಿ, ಎಸ್‌ಸಿಎಸ್ಪಿ-ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ಬಳಕೆ ವಿರುದ್ಧ ಹೋರಾಟದ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಭಾಗಿಯಾಗುವ ಸಾಧ್ಯತೆ ಇದೆ.