ದೇಶ

ಈ ಡ್ರೋನ್ ತೂಕ ಜಸ್ಟ್ 33 ಗ್ರಾಂ…ಯುದ್ಧ ಅಂದ್ರೆ ಕುಣಿದು ಕುಪ್ಪಳಿಸುತ್ತೆ..!

ಶತ್ರುವಿನ ಜಾಗ ಎಂತಹದ್ದೇ ಇರಲಿ, ಪುಟ್ಟ ರಂಧ್ರ ಸಿಕ್ಕಿದ್ರೆ ಸಾಕು, ಒಳನುಸುಳಿ ಬಿಡುತ್ತೆ. ಭಾರತೀಯ ಸೇನೆ ಪಾಲಿಗೆ ಇದೊಂದು ದೊಡ್ಡ ಅಸ್ತ್ರ. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎಂಬಂತಹ ಕೆಲಸ ಮಾಡುತ್ತೆ. ಭಾರತಕ್ಕೆ ದೊಡ್ಡ ಸವಾಲು ಭಯೋತ್ಪದಕರ ನಿಗ್ರಹ. ದೇಶದೊಳಗೆ ನುಸುಳಿ ಬಂದು ಅಯಕಟ್ಟಿನ ಜಾಗದಲ್ಲಿ ಕೂತು ದೇಶದ ಮೇಲೆ ದಾಳಿಗೆ ಯತ್ನಿಸುವವರ ಅಡ್ಡಾಗೆ ನುಗ್ಗಿ ದೃಶ್ಯಗಳನ್ನ ಲೈವ್ ಆಗಿ ಕಳಿಸುತ್ತೆ.

ಭಾರತೀಯ ಸೇನೆಯ ಭತ್ತಳಿಕೆಲ್ಲಿದೆ ಒಂದು ಪುಟ್ಟ ಡ್ರೋನ್. ತೂಕ ಜಸ್ಟ್ 33 ಗ್ರಾಂ… ಅಂಗೈನಷ್ಟು ಉದ್ದ ಒಂದು ಇಂಚು ಅಗಲವಿರುವ ಈ ಡ್ರೋನ್ ಮಾಡುವ ಕೆಲಸ ಅಗಾಧ. ಹೌದು ಭಾರತೀಯ ಸೇನೆ ಕೂಡ ತಂತ್ರಜ್ಙಾನ ಬಳಕೆಯಲ್ಲಿ ಇಸ್ರೇಲ್ ನಂತೆ ಮುಂದಿದೆ. ಅದಕ್ಕೆ ಉದಾಹರಣೆ ಈ 33 ಗ್ರಾಂ ತೂಕದ ಬ್ಲಾಕ್ ಹರ್ನೆಟ್ ಸೇನೆ ಸೇರಿಕೊಂಡಿರೋದು.

ಶತ್ರುವಿನ ಜಾಗ ಎಂತಹದ್ದೇ ಇರಲಿ, ಪುಟ್ಟ ರಂಧ್ರ ಸಿಕ್ಕಿದ್ರೆ ಸಾಕು, ಒಳನುಸುಳಿ ಬಿಡುತ್ತೆ. ಭಾರತೀಯ ಸೇನೆ ಪಾಲಿಗೆ ಇದೊಂದು ದೊಡ್ಡ ಅಸ್ತ್ರ. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎಂಬಂತಹ ಕೆಲಸ ಮಾಡುತ್ತೆ. ಭಾರತಕ್ಕೆ ದೊಡ್ಡ ಸವಾಲು ಭಯೋತ್ಪದಕರ ನಿಗ್ರಹ. ದೇಶದೊಳಗೆ ನುಸುಳಿ ಬಂದು ಅಯಕಟ್ಟಿನ ಜಾಗದಲ್ಲಿ ಕೂತು ದೇಶದ ಮೇಲೆ ದಾಳಿಗೆ ಯತ್ನಿಸುವವರ ಅಡ್ಡಾಗೆ ನುಗ್ಗಿ ದೃಶ್ಯಗಳನ್ನ ಲೈವ್ ಆಗಿ ಕಳಿಸುತ್ತೆ. 

ಇನ್ನು ಈ ಡ್ರೋನ್ ಮೂಲಕ ನಿಖರವಾದ ಟಾರ್ಗೆಟನ್ನ ಕೂಡ ಗುರುತಿಸಿ ಬಡಿದಾಕಬಹುದು. ಇದೇ ಮೈಕ್ರೋ ಡ್ರೋನ್ ಬಳಸಿಕೊಂಡು ಇಸ್ರೇಲ್ ತನ್ನ ಶತ್ರುಗಳನ್ನ ನಾಶ ಮಾಡೋದ್ರಲ್ಲಿ ಎಕ್ಸಪರ್ಟ್. ಅಂದಾಗೆ ಈ ಬ್ಲಾಕ್ ಹಾರ್ನೆಟ್ ಡ್ರೋನ್ ಕಂಡು ಹಿಡಿದಿದ್ದು ನಾರ್ವೆ ದೇಶ.. ಇದರ ಬೆಲೆ ಎರಡು ಲಕ್ಷ ಡಾಲರ್. ಅಂದ್ರೆ ಭಾರತೀಯ ಮೌಲ್ಯದಲ್ಲಿ ಒಂದು ಕೋಟಿ 68 ಲಕ್ಷ ರೂಪಾಯಿ.

ಸುಮಾರು 20 ನಿಮಿಷಗಳ ಕಾಲ ಸದ್ದೆ ಮಾಡದೆ ಕಾರ್ಯಾಚರಣೆ ಮಾಡುವ ಕೆಪಾಸಿಟಿ ಇದಕ್ಕೆ ಇದೆ. ಇನ್ನು ಗಾತ್ರದ ಬಗ್ಗೆ ಹೇಳೋದಾದ್ರೆ 6 ಇಂಚು ಉದ್ದ, ಒಂದು ಇಂಚು ಅಗಲವಿದೆ, ಮೂರು ಕ್ಯಾಮರಾಗಳಿವೆ. 45 ಡಿಗ್ರಿ  ಕವರ್ ಮಾಡುತ್ತೆ. ವೀಡಿಯೋ ಮತ್ತು ಸ್ಟಿಲ್ ಫೋಟೋಸ್ ತೆಗೆಯುತ್ತೆ. ಗಂಟೆಗೆ 21 ಕಿಲೋಮೀಟರ್ ಪ್ರಯಾಣಿಸಬಲ್ಲದು, ಡಿಜಿಟಲ್ ಡೇಟಾ ಲಿಂಕ್ ಮೂಲಕ ಲೈವ್ ಫೀಡ್ ಒದಗಿಸುತ್ತೆ. ಜಿಪಿಎಸ್ ಮೂಲಕ ಲೊಕೇಷನ್ ಕಳಿಸುತ್ತೆ. 

ಅವಿತಿರುವ ಶತ್ರುಗಳನ್ನ ಸಹ ಸದ್ದೆ ಇಲ್ಲದೇ ಹುಡುಕುವ ಈ ಮೈಕ್ರೋ ಡ್ರೋನ್ 2002ರಿಂದ 2014ರವರೆಗೆ ಆಫ್ಘಾನಿಸ್ತಾನದ ಮೇಲೆ ಯುಎಸ್ ಆರ್ಮಿ ನಡೆಸಿದ ಆಪರೇಷನ್ ಹೆರಿಕ್ ನಲ್ಲಿ ಬ್ಲಾಕ್ ಹಾರ್ನೆಟ್ ಡ್ರೋನ್ ಮೊದಲ ಬಾರಿಗೆ ಬಳಕೆಯಾಗಿತ್ತು. ಇದೀಗ ಭಾರತೀಯ ಸೇನೆಯ ಭತ್ತಳಿಕೆ ಸೇರಿ ಇಂಡಿಯನ್ ಆರ್ಮಿಯನ್ನ ಮತ್ತಷ್ಟು ಬಲಿಷ್ಟಗೊಳಿಸಿದೆ.