ಸ್ಪೆಷಲ್ ಸ್ಟೋರಿ

ಬಿಪಿಎಲ್ ಕಾರ್ಡ್ ರದ್ದು, ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದ ರಾಜ್ಯ ನಾಯಕರು

ಕೇಂದ್ರದ ನಿಯಮದ ಪ್ರಕಾರ ಕಾರ್ಡ್ ರದ್ದು ಮಾಡಿದ್ದೇವೆ ಅಂತಿದ್ದಾರೆ, ಕಳೆದ ವಾರವೇ ಈ ಬಗ್ಗೆ ಯಾಕೆ ಹೇಳಿಲ್ಲ ಅಂತಾ HDK ಪ್ರಶ್ನಿಸಿದ್ದಾರೆ..

ಬಿಪಿಎಲ್ ಅರ್ಹರಿಗೆ ಅನ್ಯಾಯವಾಗಲು ಬಿಡಲ್ಲ
ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ದಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಅಂತಾ ಡಿಕೆಶಿ ಹೇಳಿದ್ದಾರೆ.. ಕಾರ್ಡ್ ವಂಚಿತರಿಗೆ ಮರು ಅರ್ಜಿ ಹಾಕಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸೂಚನೆ ನೀಡಿದ್ದೇವೆ, ಯಾರೂ ಭಯಪಡುವ ಅಗತ್ಯವಿಲ್ಲ, ವಿರೋಧ ಪಕ್ಷಗಳಿಂದ ಸುಖಾಸುಮ್ಮನೆ ಟೀಕೆ ಅಂತಾ ಗುಡುಗಿದ್ದಾರೆ..
ಕಾರ್ಡ್ ರದ್ದು.. ಸರ್ಕಾರದಲ್ಲೇ ಕ್ಲಾರಿಟಿ ಇಲ್ಲ
ಕೇಂದ್ರದ ನಿಯಮದ ಪ್ರಕಾರ ಕಾರ್ಡ್ ರದ್ದು ಮಾಡಿದ್ದೇವೆ ಅಂತಿದ್ದಾರೆ, ಕಳೆದ ವಾರವೇ ಈ ಬಗ್ಗೆ ಯಾಕೆ ಹೇಳಿಲ್ಲ ಅಂತಾ HDK ಪ್ರಶ್ನಿಸಿದ್ದಾರೆ.. ಕಾರ್ಡ್ ರದ್ದು ಸಂಬಂಧ ಜನರು ಕೇಳ್ತಿರುವ ಪ್ರಶ್ನಿಗಳಿಗೆ ಸರ್ಕಾರ ಉತ್ತರ ಕೊಡಲು ಆಗ್ತಿಲ್ಲ, ಸಿಎಂ ಒಂದು ಹೇಳಿಕೆ, ಸಚಿವರೇ ಒಂದು ಹೇಳಿಕೆ ಕೊಡ್ತಾರೆ ಅಂತಾ ಕಿಡಿಕಾರಿದ್ದಾರೆ.. 
ಅನ್ನಭಾಗ್ಯ ಕೊಡುತ್ತೇವೆ ಎಂದವರಿಂದ ಹಸಿವಿನ ಭಾಗ್ಯ 
ಜನರಿಗೆ ಅನ್ನಭಾಗ್ಯ ಕೊಡುತ್ತೇವೆ ಎಂದವರು ಹಸಿವಿನ ಭಾಗ್ಯ ಕೊಡ್ತಿದ್ದಾರೆ, ರೇಷನ್ ಕಾರ್ಡ್ ರದ್ದು ಮಾಡುವ ಮೂಲಕ ಸರ್ಕಾರ ಬಡವರ ಅನ್ನ ಕಸಿದುಕೊಳ್ಳುವ ಯತ್ನ ಮಾಡುತ್ತಿದೆ ಅಂತಾ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.. ಜನರ ಕಷ್ಟ ಸರ್ಕಾರಕ್ಕೆ ಗೊತ್ತಾಗ್ತಿಲ್ಲ, ನಾವು ಜನರ ಪರ ಹೋರಾಟ ಮಾಡ್ತೇವೆ ಎಂದಿದ್ದಾರೆ..
ಸರ್ಕಾರಕ್ಕೆ ಡಿಸೆಂಬರ್ 9ರ ಡೆಡ್ಲೈನ್ - ಅಶೋಕ್
ರದ್ದಾಗಿರುವ ಬಿಪಿಎಲ್ ಕಾರ್ಡ್ಗಳನ್ನ ಡಿಸೆಂಬರ್ 9ರ ಒಳಗೆ ವಾಪಸ್ ಕೊಡಬೇಕು, ಇಲ್ಲದಿದ್ದರೆ ಬೀದಿಗಳಿದು ಹೋರಾಟ ಮಾಡ್ತೀವಿ ಅಂತಾ ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.. ರದ್ದಾಗಿರೋ ಕಾರ್ಡ್ ಕೊಡ್ಬೇಕು, ಇಲ್ಲದಿದ್ದರೆ ವಿಧಾನಸೌಧಕ್ಕೆ ಬೀಗ ಹಾಕ್ತೇವೆ, ಮೊದಲು ಜನರಿಗೆ ಅಕ್ಕಿ ಕೊಡಿ ಅಂತಾ ಆಗ್ರಹಿಸಿದ್ದಾರೆ..
ಕೇಂದ್ರ ಸರ್ಕಾರದ ನಿಯಮದಂತೆ ಕಾರ್ಡ್ ರದ್ದು
ಕೇಂದ್ರದ ಮಾನದಂಡದಂತೆ ಕಾರ್ಡ್ ಪರಿಷ್ಕರಣೆ ಮಾಡಲಾಗಿದೆ, ಈಗ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ ಅಂತಾ ಮುನಿಯಪ್ಪ ಕಿಡಿಕಾರಿದ್ದಾರೆ.. ಸರ್ಕಾರಿ ನೌಕರರು, ತೆರಿಗೆ ಪಾವತಿದಾರರ ಕಾರ್ಡ್ ಮಾತ್ರ ರದ್ದು ಮಾಡಿದ್ದೇವೆ, ಬಡವರ ಕಾರ್ಡ್ ರದ್ದಾಗಿದ್ದರೆ ವಾಪಸ್ ಕೊಡ್ತೇವೆ ಎಂದಿದ್ದಾರೆ..