ಸ್ಪೆಷಲ್ ಸ್ಟೋರಿ
ತಂಗಿ ಅಂತೇಳಿ ನಾಮಿನೇಷನ್‌ನಿಂದ ಉಳಿಸಿದ ಶಿಶೀರ್‌ಗೆ ಮೋಸ ಮಾಡಿದ್ರಾ ಚೈತ್ರಾ ಕುಂದಾಪುರ..?
ಬಿಗ್ ಬಾಸ್ ಕನ್ನಡ ಶಿಶೀರ್ ಚೈತ್ರಾ ಮೇಲೆ ರೌದ್ರ ತಾಂಡವವಾಡಿದ್ದಾರೆ, ತಮ್ಮ 12ವರ್ಷದ ಶ್ರಮ ವ್ಯರ್ಥವಾಯ್ತು ಎಂದಿದ್ದೇಕೆ..
ಈ ವಾರ ಬಿಗ್ ಬಾಸ್‌ನಲ್ಲಿ ಎರಡೂ ಭಿನ್ನ ಮನಸ್ಸುಗಳನ್ನ ಒಟ್ಟಿಗೆ ಸೇರಿಸಿ ಅವರ ಆಟ ಹೇಗಿರುತ್ತೆ ಅಂತಾ ನೋಡೋ ಟಾಸ್ಕ್ ನೀಡಿದ್ರು ಬಿಗ್ ಬಾಸ್, ಜೋಡಿಗಳಾಗಿ ಒಟ್ಟಿಗೆ ಹಗ್ಗ ಕಟ್ಟಿಕೊಂಡು ಆಟವಾಡುವ ಸ್ಪರ್ಧಿಗಳಿಗೆ ನಾಮಿನೇಷನ್ ಟ್ರಬಲ್ ಕೊಟ್ಟಿದ್ರು ಬಿಗ್ ಬಾಸ್ ಅದೇನು ಅಂದ್ರೆ ಜೋಡಿಗಳಲ್ಲಿ ಒಬ್ಬರು ಮಾತ್ರ ಉಳಿಸಿ ಇನ್ನೊಬ್ಬರು ಈ ವಾರ ನಾಮಿನೇಷನ್‌ಗೆ ಹೋಗೋ ಟಾಸ್ಕ್ ಅದಾಗಿತ್ತು, ಈ ಟಾಸ್ಕ್‌ನಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಅಂದ್ರೆ ಚೈತ್ರಾ ಕುಂದಾಪುರ ಹಾಗೂ ಶಿಶೀರ್, ಇಲ್ಲಿ ಚೈತ್ರಾ ಕುಂದಾಪುರ ತನ್ನ ಕಷ್ಟವನ್ನ ಶಿಶೀರ್ ಮುಂದೆ ಹೇಳ್ಕೊಂಡು, ನಾನು ಈ ಮನೆಯಲ್ಲಿ ಉಳಿಯೋದು ತುಂಬಾ ಅವಶ್ಯಕತೆ ಇದೆ, ಹಾಗಾಗಿ ನನ್ನನ್ನ ಉಳಿಸಿ ಅಣ್ಣ ಎಂದು ಕೇಳಿಕೊಂಡಿದ್ರು, ಇದಕ್ಕೆ ಶಿಶೀರ್ ಕೂಡಾ ಮನಸ್ಸು ಮಾಡಿ, ನಾನೇ ನಾಮಿನೇಟ್ ಆಗ್ತೀನಿ ಅಂತೇಳಿ ಬಿಗ್ ಬಾಸ್‌ಗೆ ಹೇಳಿದ್ರು..ಆದ್ರೆ ಹೀಗೆ ತಂಗಿ ಚೈತ್ರಾ ಕುಂದಾಪುರಗಾಗಿ ತಾನು ನಾಮಿನೇಟ್ ಆಗಿದ್ದ ಶಿಶೀರ್‌ಗೆ ಚೈತ್ರಾಳಿಂದ ಬಿಗ್ ಶಾಕ್ ಕಾದಿತ್ತು..
ಹೌದು ಚೈತ್ರಾ ಕುಂದಾಪುರ ಮುಂಬರುವ ಟಾಸ್ಕ್‌ನಲ್ಲಿ ನೀವು ನಿಮ್ಮ ಜೊತೆಗಾರನನ್ನ ಬಿಟ್ಟು ಮನೆಯ ಕ್ಯಾಪ್ಟನ್ ತ್ರಿವಿಕ್ರಂ ಜೊತೆ ಮುಂದಿನ ಆಟವನ್ನ ಮುಂದುವರೆಸುತ್ತೀರಾ ಅಂತಾ ಕೇಳಿದ್ರು, ಅದಕ್ಕೆ ಚೈತ್ರಾ ಕುಂದಾಪುರ ಶಿಶೀರ್ ಮಾಡಿರೋ ತ್ಯಾಗವನ್ನ ಸ್ವಲ್ಪವೂ ಯೋಚಿಸದೆ ನಾನು ತ್ರಿವಿಕ್ರಂ ಜೊತೆ ಆಟವಾಡ್ತೀನಿ ಅಂತಾ ಹೇಳಿದ್ದು, ಎಲ್ಲೋ ಒಂದು ಕಡೆ ಚೈತ್ರಾ ಶಿಶೀರ್ ಬೆನ್ನಿಗೆ ಚೂರಿ ಹಾಕಿಬಿಟ್ಟರ ಅನ್ನೋ ಪ್ರಶ್ನೆ ಬಿಗ್ ಬಾಸ್ ಪ್ರಿಯರಿಗೆ ಕಾಡೋದಕ್ಕೆ ಶುರುವಾಗಿದೆ..