ಇದೇ ಮೊದಲ ಬಾರಿಗೆ ವಿಶ್ವಸುಂದರಿ ಕಿರೀಟ ಡೆನ್ಮಾರ್ಕ್ ಮುಡಿಗೇರಿದ್ದು, ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದೆ. ವಿಕ್ಟೋರಿಯಾ ಕೆಜೆರ್ 2024ನೇ ಸಾಲಿನ ವಿಶ್ವಸುಂದರಿ ಪಟ್ಟಕ್ಕೇರಿದ್ದಾರೆ.

ಬೆಕ್ಕಿನ ಕಣ್ಣಿನ ಚೆಲುವೆ..ಬಾಣದಂತಹ ಹುಬ್ಬು..ಮುದ್ದಾದ ನಗುವಿನ ಮೊಗ..ನೋಡೋಕೆ ಥೇಟ್ ಬಾರ್ಬಿ ಡಾಲ್ ತರನೇ ಕಾಣುವ ಈಕೆ ವಿಕ್ಟೋರಿಯಾ ಕೆಜೆರ್ ಥೀಲ್ವಿಗ್. 2024ನೇ ಸಾಲಿನಲ್ಲಿ ಡೆನ್ಮಾರ್ಕ್ಗೆ ಐತಿಹಾಸಿಕ ದಾಖಲೆ ಬರೆದುಕೊಟ್ಟ ವಿಶ್ವಸುಂದರಿ. ಅಂದ್ರೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ, ಡೆನ್ಮಾರ್ಕ್ಗೆ ಪ್ರಪ್ರಥಮ ಬಾರಿಗೆ ಕಿರೀಟ ಮುಡಿಗೇರಿಸಿದ್ದಾರೆ.
ಈ ಸುಂದರಿ ಯಾರು..ಈಕೆಯ ಹಿನ್ನೆಲೆಯಾದ್ರೂ ಏನು ಅಂತ ನೋಡೋದಾದ್ರೆ, 2004ರಲ್ಲಿ ಜನಿಸಿದ ಕೆಜೆರ್ ಡೆನ್ಮಾರ್ಕ್ ರಾಜಧಾನಿಯಾದ ಕೋಪನ್ ಹೇಗನ್ನಲ್ಲಿ ಬೆಳೆದ್ರು. ಬಿಸಿನೆಸ್ ಹಾಗೂ ಮಾರ್ಕೆಟಿಂಗ್ನಲ್ಲಿ ಪದವಿ ಪಡೆದಿರುವ ಈಕೆ, ಜ್ಯುವೆಲರಿ ಉದ್ಯಮದಲ್ಲಿ ಕೆಲಸ ಮಾಡಿಕೊಂಡೇ ತನ್ನ ಶೈಕ್ಷಣಿಕ ಜೀವನವನ್ನ ಮುಗಿಸಿದ್ರು. ಅಲ್ಲದೇ ಡೈಮಂಡ್ ಬಿಸಿನೆಸ್ನಲ್ಲೂ ಅತ್ಯಂತ ಪರಿಣತಿ ಹೊಂದಿದ್ದು, ಉದಯೋನ್ಮುಖ ಉದ್ಯಮಿಯಾಗಿದ್ದರು.
ಇದಿಷ್ಟೇ ಅಲ್ಲ ಕೆಜೆರ್ಗೆ ಡ್ಯಾನ್ಸ್ ಕಲೆಯೂ ಅಷ್ಟೇ ಚೆನ್ನಾಗಿ ಮೈಗೂಡಿತ್ತು. ಈಕೆ ಡ್ಯಾನಿಶ್ ಚಾಂಪಿಯನ್ ಕೂಡ ಆಗಿದ್ರು. ಅಲ್ಲದೇ ನೃತ್ಯ ಶಿಕ್ಷಕಿಯಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರಂತೆ. ಇದರ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡಿದ್ದಾರೆ. ಮಾನಸಿಕ ಆರೋಗ್ಯದ ಜಾಗೃತಿಯನ್ನೂ ಮೂಡಿಸಿದ್ದಾರೆ. ಸ್ವಯಂ-ಸಬಲೀಕರಣವನ್ನು ಪ್ರೇರೇಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಕೆಲಸಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇಷ್ಟೆಲ್ಲಾ ಪ್ರತಿಭೆ ಹೊಂದಿರುವ ಕೆಜೆರ್ಗೆ ಓದಿನಲ್ಲೂ ಅಷ್ಟೇ ಉತ್ಸಾಹ..ಬಿಸಿನೆಸ್ ಓದಿರೋದರ ಜೊತೆಗೆ, ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕಾನೂನು ಅಧ್ಯಯನದಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದಾರೆ. ಒಟ್ನಲ್ಲಿ ಈ ಬಾರಿ ಡೆನ್ಮಾರ್ಕ್ ಪ್ರತಿಭಾನ್ವಿತ ಸುಂದರಿಯಿಂದ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದೆ.