ಈಗಿನ ಜೆನರೇಷನ್ ಜನರಿಗೆ ನಾನು ದಪ್ಪ ಇದ್ದೀನಿ ಅನ್ನೋ ಕೊರಗು ಹೆಚ್ಚಾಗಿಯೇ ಇರುತ್ತೆ. ದಪ್ಪಗಿಲ್ಲದಿದ್ರೂ ನಾನು ಫಿಟ್ ಆಗಿರಬೇಕು ಎಂದು ಏನೇನೋ ಸರ್ಕಸ್ ಮಾಡುತ್ತಾರೆ. ದಪ್ಪಗಿದ್ದರೆ ಬೇಕಾದ ಬಟ್ಟೆಗಳನ್ನು ಹಾಕೋಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದ್ರೆ ಉತ್ತರ-ಪಶ್ಚಿಮ ಆಫ್ರಿಕಾದ ಮೌರಿಟಾನಿಯಲ್ಲಿ ಹುಡುಗಿಯರು ದಪ್ಪಗಿರೋಕೇ ಇಷ್ಟ ಪಡ್ತಾರೆ. ಯಾಕಂದ್ರೆ ದಪ್ಪಗಿರುವ ಹುಡುಗಿಯರನ್ನು ಈ ದೇಶದಲ್ಲಿ ಅದೃಷ್ಟ ಎಂದು ಕರೆಯುತ್ತಾರಂತೆ.
ಪದ್ದತಿ, ಸಂಪ್ರದಾಯದ ಪ್ರಕಾರ ಈ ದೇಶದಲ್ಲಿ ಹೆಣ್ಣು ಮಕ್ಕಳು ದಪ್ಪಗಿರುವುದರೆಂದರೆ, ದೊಡ್ಡ ಸಂಪತ್ತು ಎಂದರ್ಥ. ಇದರಿಂದ ದಪ್ಪಗಿರುವುದು ಇಲ್ಲಿನ ಪ್ರತಿಷ್ಠೆಯ ಸಂಕೇತವೂ ಆಗಿದೆ. ಹೀಗಾಗಿಯೇ ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಅವರಿಗೆ, ಸಾಕು ಸಾಕು ಎನ್ನುವಷ್ಟು ಊಟ, ತಿಂಡಿ ತಿನ್ನಿಸುತ್ತಾರೆ.