ಸ್ಪೆಷಲ್ ಸ್ಟೋರಿ

ನಾಳೆಯಿಂದ ಕರ್ನಾಟಕದಲ್ಲಿ ಈ ಐದು ದಿನಗಳು ಶಾಲೆ ಕಾಲೇಜುಗಳಿಗೆ ರಜಾ ಮಜಾ..ಇದಕ್ಕೆ ಅಸಲಿ ಕಾರಣವೇನು..

ನವೆಂಬರ್‌ ತಿಂಗಳು ಅಂದ್ರೆ ಅದು ಹಬ್ಬದ ತಿಂಗಳು ಅಂದ್ರೆ ಕನ್ನಡದ ಹಬ್ಬ ಕನ್ನಡ ರಾಜ್ಯೋತ್ಸವದಿಂದ ಶುರುವಾದರೆ ಕನಕದಾಸ ಜಯಂತಿಯವರೆಗೂ ಶಾಲಾ ಕಾಲೇಜುಗಳಿಗೆ ರಜೆ..

ಸ್ನೇಹಿತರೇ ಕಳೆದ ತಿಂಗಳು ಮಳೆಯ ಕಾರಣ ಅದೆಷ್ಟೋ ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು, ಇದಾಗಿ ನವೆಂಬರ್‌ನಲ್ಲಿ ಸರಣಿ ರಜೆಗಳು ವಿಧ್ಯಾರ್ಥಿಗಳಿಗೆ ಸಿಕ್ಕಿತ್ತು, ಕನ್ನಡ ರಾಜ್ಯೋತ್ಸವ ದೀಪಾವಳಿ ಹೀಗೆ ಒಟ್ಟೊಟ್ಟಿಗೆ ಬಂದಿದ್ರಿಂದ ಶಾಲಾ ಕಾಲೇಜುಗಳಿಗೆ ರಜೆ ಇತ್ತು, ಆದ್ರೆ ನಾಳೆಯಿಂದ ಅಂದ್ರೆ ನವೆಂಬರ್‌ 13ರಿಂದ ಐದು ದಿನಗಳ ಕಾಲ ರಜೆ ಫಿಕ್ಸ್‌ ಹೇಗೆ ಅಂತೀರಾ, ಈ ವರ್ಷದ ಕ್ಯಾಲೆಂಡರ್ನೋಡುವುದಾದರೆ, ನವೆಂಬರ್‌ 13ರಂದು ತುಳಸಿ ಪೂಜೆ ಇದೆ. ಇದು ದೀಪಾವಳಿ ನಂತರ ಆಚರಿಸಲ್ಪಡುವ ಮಹತ್ವದ ಹಬ್ಬವಾಗಿದೆ. ಕಾರಣದಿಂದಾಗಿ ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ತುಳಸಿ ಹಬ್ಬದ ದಿನದಂದು ರಜೆ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ

ಇನ್ನು ನವೆಂಬರ್‌ 14ರಂದು ಮಕ್ಕಳ ದಿನಾಚರಣೆಯಿದ್ದು, ಹೆಚ್ಚಿನ ಶಾಲೆಗಳಲ್ಲಿ ತರಗತಿಗಳು ನಡೆಯುವುದಿಲ್ಲ. ಬದಲಾಗಿ, ಪಠ್ಯೇತರ ಚಟುವಟಿಕೆಗಳು ನಡೆಯುತ್ತವೆ. ಇನ್ನು ನವೆಂಬರ್‌ 15ರಂದು ಗುರುನಾನಕ್ ಜಯಂತಿ ಇದೆ, ನವೆಂಬರ್‌ 16ರಂದು ಶನಿವಾರವಾದ ಕಾರಣ ಅರ್ಧ ದಿನ ತರಗತಿಗಳು ನಡೆಯುತ್ತವೆ.      

ಇದಾದ ನಂತರ ನವೆಂಬರ್‌ 17ರಂದು ಭಾನುವಾರವಾಗಿದ್ದು, ಎಂದಿನಂತೆ ಸಾಮಾನ್ಯ ರಜೆ ಇರುತ್ತೆ. ನವೆಂಬರ್‌ 18ರಂದು ಕನಕದಾಸ ಜಯಂತಿ ಆಚರಿಸಲಾಗುವ ಕಾರಣ ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ದಿನ ರಜೆ ಇರುತ್ತೆ.     

ಒಟ್ಟಾರೆಯಾಗಿ ವರ್ಷದ ಕ್ಯಾಲೆಂಡರ್ಪ್ರಕಾರ ಕರ್ನಾಟಕ ಸೇರಿದಂತೆ ದೇಶದ ಅನೇಕ ಶಾಲಾ ಕಾಲೇಜುಗಳಲ್ಲಿ ನವೆಂಬರ್‌ 13 ರಿಂದ 18ರವರೆಗೆ ಸತತ ರಜೆ ಇರುತ್ತೆ.