ಸ್ಪೆಷಲ್ ಸ್ಟೋರಿ

ಅಸತ್ಯದ ಲೋಕದಲ್ಲಿ ಸತ್ಯ ಹುಡುಕಲು ‌ಹೋಗುತ್ತಿದ್ದೇನೆ: ಪತ್ರ ಬರೆದಿಟ್ಟು ವಿದ್ಯಾರ್ಥಿ ನಾಪತ್ತೆ

ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಮೋಕ್ಷಿತ್ ಋಷಿ, "ನಾನು ದೇವರ ಮಗ, ವಿಷ್ಣುವಿನ ಮಗ. ಜಗತ್ತಿನ ಜನರ ಕಲ್ಯಾಣಕ್ಕಾಗಿ ದೇವರು ನನ್ನನ್ನ ಆರಿಸಿಕೊಂಡಿದ್ದಾನೆ. ಈ ರಾಜಜೀವನವನ್ನ ತೊರೆದು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದಾನೆ ನನ್ನನ್ನು ಹುಡಕಬೇಡಿ" ಎಂದು ನೋಟ್ ಬುಕ್ ನಲ್ಲಿ ಪತ್ರ ಬರೆದಿಟ್ಟು ಜನವರಿ 16ರಂದು ಮನೆಬಿಟ್ಟು ನಾಪತ್ತೆಯಾಗಿದ್ದಾನೆ.

ಬೆಂಗಳೂರು : ಅಸತ್ಯದ ಲೋಕದಲ್ಲಿ ಸತ್ಯ ಹುಡುಕಲು ‌ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ವಿದ್ಯಾರ್ಥಿಯೊಬ್ಬ ಮನೆಬಿಟ್ಟು ಹೋಗಿದ್ದಾನೆ. ಬೆಂಗಳೂರಿನ ವಿದ್ಯಾರಣ್ಯಪುರದ ಬಾಲಕ ಮೋಹಿತ್ ಋಷಿ (17) ರಾತ್ರೋರಾತ್ರಿ ಮನೆಬಿಟ್ಟು ಹೋಗಿದ್ದಾನೆ.

ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಮೋಕ್ಷಿತ್ ಋಷಿ, "ನಾನು ದೇವರ ಮಗ, ವಿಷ್ಣುವಿನ ಮಗ. ಜಗತ್ತಿನ ಜನರ ಕಲ್ಯಾಣಕ್ಕಾಗಿ ದೇವರು ನನ್ನನ್ನ ಆರಿಸಿಕೊಂಡಿದ್ದಾನೆ. ಈ ರಾಜಜೀವನವನ್ನ ತೊರೆದು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದಾನೆ ನನ್ನನ್ನು ಹುಡಕಬೇಡಿ" ಎಂದು ನೋಟ್ ಬುಕ್ ನಲ್ಲಿ ಪತ್ರ ಬರೆದಿಟ್ಟು ಜನವರಿ 16ರಂದು ಮನೆಬಿಟ್ಟು ನಾಪತ್ತೆಯಾಗಿದ್ದಾನೆ. 

ಪುತ್ರ ನಾಪತ್ತೆಯಾಗಿರುವ ಬಗ್ಗೆ ಮೋಹಿತ್ ಋಷಿಯ ತಂದೆ ಅರ್ಜುನ್ ಕುಮಾರ್ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಕೊಡಿಗೇಹಳ್ಳಿ ಪೊಲೀಸರು ಮೋಹಿತ್ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇನ್ನೂ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದ್ದು, ಅಲ್ಲಿಗೆ ಹೋಗಿರುವ ಶಂಕೆಯಿದೆ. ಇತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ಮೋಹಿತ್ ಭಾವಚಿತ್ರವನ್ನು ಹಂಚಿಕೊಂಡಿದ್ದು, ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.