ಸ್ಪೆಷಲ್ ಸ್ಟೋರಿ

ಬಾಗಿಲು ತೆಗೀರಿ ಮನೆಯಿಂದ ಹೊರ ಹೋಗ್ತೀನಿ ಅಂದಿದ್ದೇಕೆ ಗೋಲ್ಡ್ ಸುರೇಶ್..?

ಬಿಗ್ ಬಾಸ್ ಮನೆ 50ದಿನಕ್ಕೆ ಕಾಲಿಟ್ಟು 51ನೇ ದಿನಕ್ಕೆ ಮುನ್ನುತ್ತಿದೆ, ಒಂದು ಕಡೆ ಎಲಿಮಿನೇಷನ್ ಕಾವು ಶುರುವಾಗಿದ್ರೆ ಮತ್ತೊಂದು ಕಡೆ ಗೋಲ್ಡ್ ಸುರೇಶ್ ಹಾಗೂ ರಜತ್ ಮಧ್ಯೆ ಬಿಗ್ ಫೈಟ್ ನಡೆದಿದೆ..

ಬುಧವಾರದ ಬಿಗ್ ಬಾಸ್ ಎಪಿಸೋಡ್ನಲ್ಲಿ ಎಂದಿನಂತೆ ಬಿಗ್ ಮನೆಯಲ್ಲಿ ಟಾಸ್ಕ್ ಕೊಟ್ಟಿದ್ದಾರೆ, ಶೋಭಾ ಟೀಂ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಭವ್ಯ ಗೌಡ ಟೀಂ, ಈ ಎರಡೂ ಟೀಂ ಮಧ್ಯೆ, ಚಂಡು ಹಿಡಿದು ಒಂದು ಬಲೆಯಿಂದ ಮತ್ತೊಂದು ಬಲೆಯೊಳಗೆ ನುಗ್ಗಿ ಬಂದು, ತಮ್ಮ ತಂಡಕ್ಕೆ ಚಂಡನ್ನ ಸಂಗ್ರಹಿಸಬೇಕಾದ ಟಾಸ್ಕ್ ಇದಾಗಿತ್ತು, ಇಲ್ಲಿ ಎಲ್ಲರೂ ಕೂಡಾ ಆಕ್ಟೀವ್ ಆಗಿ ಆಟ ಆಡ್ತಿದ್ರು, ಇದರ ಮಧ್ಯೆ ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಹಾಗೂ ಗೋಲ್ಡ್ ಸುರೇಶ್ ಮಧ್ಯೆ ಮಾತಿನ ಚಕಮಕಿ ನಡೆದಿದೆ, ಇಲ್ಲಿ ರಜತ್ ಲೋಕಲ್ ಭಾಷೆಯಲ್ಲಿ ಕೆಲವೊಂದು ಬೈಗುಳಗಳನ್ನ ಬೈದಿದ್ದಾರೆ, ಇದಕ್ಕೆ ರಾಂಗ್ ಆದ ಗೋಲ್ಡ್ ಸುರೇಶ್ ಬಿಗ್ ಮನೆಯ ಬಾಗಿಲನ್ನ ಬಡಿದು ಬಿಗ್ ಬಾಸ್ ನಾನು ಇಲ್ಲಿರಲು ಆಗ್ತಿಲ್ಲ, ನನ್ನನ್ನು ಹೊರಗೆ ಕಳುಹಿಸಿ ಎಂದು ಹೇಳಿರೋ ಪ್ರೋಮೋ ಕಲರ್ಸ್ನಲ್ಲಿ ಪ್ರಸಾರವಾಗಿದೆ..