ಸ್ಪೆಷಲ್ ಸ್ಟೋರಿ

ಸ್ಕೂಲ್ ಬಸ್ನಲ್ಲಿ ನಿಮ್ಮ ಮಕ್ಕಳು ಎಷ್ಟು ಸೇಫ್? ಈ ಸ್ಟೋರಿ ಓದಿ

ಸ್ಕೂಲ್ ಬಸ್ಸಿನಲ್ಲಿ ಮಕ್ಕಳು ಸುರಕ್ಷಿತವಾಗಿ ಸ್ಕೂಲಿಗೆ ಹೋಗಿ ಬರುತ್ತಾರೆ ಅನ್ನೋ ನಂಬಿಕೆ ಪೋಷಕರದ್ದು. ಆದ್ರೆ ವಿಚಾರ ಬೇರೆಯೇ ಇದೆ..

ಬೆಂಗಳೂರಲ್ಲಿ ಪ್ರತಿ ದಿನ ಲಕ್ಷಾಂತರ ಮಕ್ಕಳು ಸ್ಕೂಲಿಗೆ ಹೋಗಿ ಬರ್ತಾರೆ. ಎಲ್ಲರನ್ನೂ ಅವರ ಪೋಷಕರು ಸ್ಕೂಲ್ಗೆ ಬಿಟ್ಟು ಕರ್ಕೊಂಡು ಬರೋಕೆ ಆಗೊಲ್ಲ. ಹಾಗಾಗಿ ತಮ್ಮ ಮಕ್ಕಳು ಸುರಕ್ಷಿತವಾಗಿ ಸ್ಕೂಲಿಗೆ ಹೋಗಿ ಬರಲಿ ಅಂತ ಸ್ಕೂಲ್ ಬಸ್ಸಿಗೆ ಸೇರಿಸಿರ್ತಾರೆ. ಸ್ಕೂಲ್ ಬಸ್ಸಿಗೆ ಅಂತ ಸಾವಿರಾರು ರೂಪಾಯಿಯನ್ನೂ ಕಟ್ಟಿರ್ತಾರೆ.
ಸ್ಕೂಲ್ ಬಸ್ಸಿನಲ್ಲಿ ಮಕ್ಕಳು ಸುರಕ್ಷಿತವಾಗಿ ಸ್ಕೂಲಿಗೆ ಹೋಗಿ ಬರುತ್ತಾರೆ ಅನ್ನೋ ನಂಬಿಕೆ ಪೋಷಕರದ್ದು. ಆದರೆ ನಮ್ಮ ಮಕ್ಕಳು ಸ್ಕೂಲ್ ಬಸ್ನಲ್ಲೂ ಸುರಕ್ಷಿತವಲ್ಲ ಅಂತ ಪೋಷಕರು ಆತಂಕ ಪಡುವ ಪರಿಸ್ಥಿತಿ ಬಂದಿದೆ. ಹೌದು ಸ್ಕೂಲ್ ಮಕ್ಕಳಿರೋ ಬಸ್ಸನ್ನ ಕೆಲವರು ಡ್ರೈವರ್ಗಳು ಕುಡಿದು ಓಡಿಸ್ತಿಸ್ತಿದ್ದು, ಮಕ್ಕಳ ಜೀವದ ಜತೆ ಚೆಲ್ಲಾಟವಾಡ್ತಿದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಕುಡಿದು ಸ್ಕೂಲ್ ಬಸ್ ಓಡಿಸುವ ಚಾಲಕರನ್ನು ಪತ್ತೆ ಹಚ್ಚೋಕೆ ವಿಶೇಷ ಕಾರ್ಯಾಚರಣೆ ನಡೆಸ್ತಿದಾರೆ. ಪೊಲೀಸರು ಬೆಳ್ಳಂಬೆಳಗ್ಗೆಯೇ ಡ್ರಿಂಕ್ ಆಂಡ್ ಡ್ರೈವ್ ಪತ್ತೆ ಕಾರ್ಯಾಚರಣೆ ನಡೆಸಿದ್ದು ಹಲವರು ಚಾಲಕರು ಕುಡಿದು ವಾಹನ ಚಲಾಯಿಸಿರೋದು ಪತ್ತೆಯಾಗಿದೆ. ಕುಡಿದು ವಾಹನ ಚಲಾಯಿಸಿದವರಿಂದ ಫೈನ್ ಕಟ್ಟಿಸಿಕೊಳ್ಳೋ ಜತೆಯಲ್ಲೇ ನೋಟಿಸ್ ಸಹ ಕೊಡಲಾಗಿದೆ.
ಕಳೆದ ಜನವರಿಯಲ್ಲೇ ಕುಡಿದು ಶಾಲಾ ವಾಹನ ಓಡಿಸೋ ಚಾಲಕರ ವಿರುದ್ದ ಕಾರ್ಯಾಚರಣೆ ಆರಂಭವಾಗಿತ್ತು. ಇದುವರೆಗೆ 20 ಸಾವಿರ ವಾಹನಗಳನ್ನ ತಪಾಸಣೆ ನಡೆಸಲಾಗಿದೆ ಅಂತಾರೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್.
ಕಳೆದ 10 ತಿಂಗಳಲ್ಲಿ 110 ಚಾಲಕರ ವಿರುದ್ಧ ಡ್ರಿಂಕ್ ಆಂಡ್ ಡ್ರೈವ್ ಕೇಸ್ ದಾಖಲಿಸಲಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ 22 ಜನರು, ಇನ್ನು ನವೆಂಬರ್ ನಲ್ಲಿ 24 ಜನ ಕುಡಿದು ಸ್ಕೂಲ್ ಬಸ್ ಓಡಿಸುತ್ತಾ ಸಿಕ್ಕಿ ಬಿದ್ದಿದಾರೆ. ಪ್ರತಿ ಬಾರಿ ಕಾರ್ಯಾಚರಣೆ ನಡೆಸಿದಾಗಲೂ ಕುಡಿದು ಸ್ಕೂಲ್ ಬಸ್ ಓಡಿಸುವವರು ಸಿಕ್ಕಿ ಬೀಳುತ್ತಿರೋ ಹಿನ್ನೆಲೆಯಲ್ಲಿ ಪೊಲೀಸರೂ ಸಹ ಕಠಿಣ ಕ್ರಮ ತೆಗೆದುಕೊಳ್ಳೋಕೆ ಮುಂದಾಗಿದಾರೆ.