ಹೆಮೊರೊಯಿಡ್ಸ್ ಅನ್ನು ಸಾಮಾನ್ಯವಾಗಿ ಪೈಲ್ಸ್ ಎಂದು ಕರೆಯಲಾಗುತ್ತದೆ. ಇದು ಗುದದ್ವಾರ ಮತ್ತು ಕೆಳಗಿನ ಗುದನಾಳದಲ್ಲಿನ ರಕ್ತನಾಳಗಳು ಊದಿಕೊಳ್ಳುತ್ತದೆ ಮತ್ತು ಹಿಗ್ಗುತ್ತದೆ. ಈ ಸಮಸ್ಯೆ ಪ್ರಸ್ತುತ ದಿನಗಳಲ್ಲಿ ಹಲವರನ್ನ ಭಾದಿಸುತ್ತಿರುತ್ತೆ. ಹೌದು, ಮೂಲವ್ಯಾಧಿ ಅಥವಾ ಮೊಳಕೆ ಕಾಳು ರೋಗ ಸಮಸ್ಯೆಯಿಂದ ಲಕ್ಷಾಂತರ ಜನರು ಬಳಲುತ್ತಿರುತ್ತಾರೆ4. ಗುದದ್ವಾರದಲ್ಲಿ ಸಣ್ಣದಾಗಿ ಹುಟ್ಟಿಕೊಳ್ಳುವ ಮೊಳಕೆ ಕಾಳು ಗಾತ್ರದ ಮಾಂಸದ ರೂಪವನ್ನ ಮೂಲವ್ಯಾಧಿ ಎನ್ನುತ್ತಾರೆ. ಈ ಮೂಲವ್ಯಾಧಿ ದೇಹದಲ್ಲಿ ಅತಿಯಾದ ಉಷ್ಣತೆ ಕಾಣಿಸಿಕೊಂಡಾಗ ಮಾತ್ರ ಕಾಣಿಸಿಕೊಳ್ಳುತ್ತೆ. ನಮ್ಮ ಈಗಿನ ಆಹಾರ ಪದ್ಧತಿಯಿಂದ ಮೂಲವ್ಯಾಧಿ ಅಥವಾ ಪೈಲ್ಸ್ ನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.
ಆರಂಭದ ಹಂತದಲ್ಲಿ ಪೈಲ್ಸನ್ನ ತೋರಿಸಿಕೊಂಡರೆ ಕೇವಲ ಮೆಡಿಸಿನ್ ನಿಂದಲೇ ಪರಿಹಾರ ಕಂಡುಕೊಳ್ಳಬಹುದು. ಒಂದು ವೇಳೆ ಪೈಲ್ಸ್ ಬೆಳವಣಿಗೆ ಹೊಂದಿ ದೊಡ್ಡ ಗಾತ್ರಕ್ಕೆ ತಿರುಗಿಕೊಂಡ್ರೆ ಬಹಿರ್ದೆಸೆಗೆ ಸಮಸ್ಯೆಗಳು ಹಾಗೂ ಆರೋಗ್ಯದ ಸಮಸ್ಯೆ ಕಟ್ಟಿಟ್ಟಬುತ್ತಿ. ಈ ಮೂಲವ್ಯಾಧಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳೋ ವಿಧಾನ, ಚಿಕಿತ್ಸೆ ಹಾಗೂ ಶಾಶ್ವತ ಪರಿಹಾರದ ಬಗ್ಗೆ ವೈದ್ಯರಾದ ನೂರುಲ್ಲಾರವರೇ ಸಮಯ ನ್ಯೂಸ್ ನ ಜತೆ ಮಾತನಾಡಿದ್ದಾರೆ ನೋಡಿ..