ದೇಶ

ಭಾರತದ 100 ರೂ.ಗೆ ಅರ್ಧ ಕೋಟಿಗೂ ಹೆಚ್ಚಿನ ಬೆಲೆ.. ಈ ನೋಟು ನಿಮ್‌ ಹತ್ತಿರ ಇದೆಯಾ?

ಸೆಲೆಬ್ರಿಟಿಗಳು, ಕ್ರಿಕೆಟರ್‌, ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳನ್ನ ಹರಾಜು ಹಾಕೋದು ಕೇಳಿರ್ತೀರಾ.. ನೋರ್ತೀರಾ.. ಇಂಥಾ ಐಟಂಗಳಿಗೆ ಎಲ್ಲಿಲ್ಲದ ಬೇಡಿಕೆ ಕೂಡ ಇರುತ್ತೆ.. ಲಕ್ಷದಿಂದ ಶುರುವಾಗಿ ಕೋಟ್ಯಂತರ ರೂಪಾಯಿಗೆ ಆಂಟಿಕ್‌ಪೀಸ್‌ಗಳು ಸೇಲ್‌ ಆಗುತ್ತೆ..

ಸೆಲೆಬ್ರಿಟಿಗಳು, ಕ್ರಿಕೆಟರ್‌, ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳನ್ನ ಹರಾಜು ಹಾಕೋದು ಕೇಳಿರ್ತೀರಾ.. ನೋರ್ತೀರಾ.. ಇಂಥಾ ಐಟಂಗಳಿಗೆ ಎಲ್ಲಿಲ್ಲದ ಬೇಡಿಕೆ ಕೂಡ ಇರುತ್ತೆ.. ಲಕ್ಷದಿಂದ ಶುರುವಾಗಿ ಕೋಟ್ಯಂತರ ರೂಪಾಯಿಗೆ ಆಂಟಿಕ್‌ಪೀಸ್‌ಗಳು ಸೇಲ್‌ ಆಗುತ್ತೆ.. ಇದೀಗ ಭಾರತದ ಹಳೆಯ 100 ರೂಪಾಯಿ ನೋಟು ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚಿನ ಬೆಲೆ ಹರಾಜಾಗಿದೆ..
ನೀವು ನೋಡ್ತೀದ್ದಿರಲ್ಲ.. ಭಾರತದ ಈ 100 ರೂಪಾಯಿ ನೋಟು.. ಇದನ್ನ 1950ರಲ್ಲಿ RBI,, ಹಜ್ ಯಾತ್ರೆಗಾಗಿ ಗಲ್ಫ್ ರಾಷ್ಟ್ರಗಳಿಗೆ ಹೋಗುವ ಭಾರತೀಯರಿಗಾಗಿ ಈ ವಿಶೇಷ ಕರೆನ್ಸಿ ನೋಟ್‌ ಬಿಡುಗಡೆ ಮಾಡಿತ್ತು.. ಈ ನೋಟು ಇದೀಗ ಲಂಡನ್‌ನಲ್ಲಿ ನಡೆದ ಹರಾಜಲ್ಲಿ ಬರೋಬ್ಬರಿ 56,49,650 ರೂಪಾಯಿಗೆ ಮಾರಾಟ ಮಾಡಿದೆ.. 

ಅಷ್ಟಕ್ಕೂ 100 ರೂಪಾಯಿ ನೋಟು ಅರ್ಧ ಕೋಟಿಗೂ ಹೆಚ್ಚಿನ ಮೌಲ್ಯಕ್ಕೆ ಸೇಲ್‌ ಆಗಿದಕ್ಕೂ ಕಾರಣ ಇದೆ.. ಅದೇನಂದ್ರೆ ಇದರ ಸೀರಿಯಲ್ ನಂಬರ್  HA 078400.. ಭಾರತದಿಂದ ವಿಶೇಷವಾಗಿ ಮುದ್ರಿತವಾದ ಈ ನೋಟ್‌ನ್ನು 'ಹಜ್ ನೋಟ್' ಎಂದು ಕರೆಯಲಾಗುತ್ತೆ.. ಈ ನೋಟುಗಳ ಮೊದಲು HA ಎಂಬ ಅಕ್ಷರಗಳಿಂದ ಆರಂಭವಾಗಿದ್ದು, ಸುಲಭವಾಗಿ ಇವುಗಳ ಗುರುತಿಸಬಹುದಾಗಿದೆ.. ಇಷ್ಟು ಮಾತ್ರವಲ್ಲದೇ ಈ ನೋಟುಗಳ ಬಣ್ಣವೂ ವಿಭಿನ್ನವಾಗಿತ್ತು.. ಆರ್‌ಬಿಐನಿಂದ ಪ್ರಿಂಟಾಗಿದ್ರೂ ಗಲ್ಫ್ ರಾಷ್ಟ್ರಗಳಲ್ಲಿ ಈ ಹಣ ಚಲಾವಣೆಯಲ್ಲಿತ್ತು.. ಕುವೈತ್, ಒಮಾನ್, ಕತಾರ್, ಯುಎಇ ದೇಶಗಳಲ್ಲಿ ಮಾನ್ಯವಾಗಿದ್ರೂ, ಭಾರತದಲ್ಲಿ ಮಾತ್ರ ಈ ನೋಟಿಗಳು ಚಲಾವಣೆಯಲ್ಲಿರಲಿಲ್ಲ ಅನ್ನೋದು ವಿಶೇಷ..

ಗಲ್ಫ್‌ ರಾಷ್ಟ್ರಗಳಲ್ಲಿ ಇಂಡಿಯಾದ ಕರೆನ್ಸಿ ನಡೆಯುತ್ತಿದ್ದರಿಂದ ಅದಕ್ಕಾಗಿಯೇ ಪ್ರತ್ಯೇಕ ನೋಟು ಪ್ರಿಂಟ್‌ ಮಾಡಲಾಗತಿತ್ತು.. ಆದ್ರೆ 1961ರಲ್ಲಿ ಕುವೈತ್ ತನ್ನ ಕರೆನ್ಸಿಯನ್ನು ಮುದ್ರಣ ಮಾಡಲು ಆರಂಭಿಸಿತು.. ಇದಾದ ಬಳಿಕ ಉಳಿದ ಗಲ್ಫ್ ರಾಷ್ಟ್ರಗಳು ಸಹ ನೋಟ್‌ ಮುದ್ರಣ ಕಾರ್ಯ ಶುರು ಮಾಡಿದ್ವು.. ಇದಾದ ಬಳಿಕ ಆರ್‌ಬಿಐ 1970ರಲ್ಲಿ ಹಜ್ ನೋಟುಗಳನ್ನ ಪ್ರಿಂಟ್‌ ಮಾಡೋದನ್ನೇ ನಿಲ್ಲಿಸಿದೆ.. ಹೀಗಾಗಿ ಹಜ್ ನೋಟುಗಳನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ.. ಇಂದಿಗೂ ಭಾರತದಲ್ಲಿ ಹಜ್ ಯಾತ್ರಿಗಳ ಮನೆಯಲ್ಲಿ HA ಅಕ್ಷರವಿರೋ ನೋಟುಗಳನ್ನ ನೋಡಬಹುದು.. ಹೀಗಿರುವಾಗ ಅಪರೂಪದ ನೋಟಗಳ ಕರೆನ್ಸಿ ಸಂಗ್ರಹಕಾರರು,, ಹೆಚ್ಚು ಹಣ ಪಾವತಿಸಿ ಖರೀದಿಸುತ್ತಾರೆ.. ಅದರಂತೆಯೇ ಭಾರತದ 100 ರೂಪಾಯಿಗೆ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಮೊತ್ತ ಕೊಟ್ಟು ಖರೀದಿಸಲಾಗಿದೆ..

ಅಷ್ಟೇ ಅಲ್ಲ ಭಾರತದ ಎರಡು ಹಳೆಯ 10 ರೂಪಾಯಿ ನೋಟುಗಳು ಬರೋಬ್ಬರಿ 12 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾಗಿವೆ.. ಅದಕ್ಕೆ ಕಾರಣ ಮೊದಲನೇ ವಿಶ್ವಯುದ್ಧ.. ಹೌದು.. 1918ರ ಅವಧಿಯಲ್ಲಿ ಈ ನೋಟುಗಳು ಪ್ರಿಂಟ್‌ ಆಗಿದ್ದವು.. ಹೀಗಾಗಿ ದೊಡ್ಡ ಮೊತ್ತಕ್ಕೇ ಸೇಲ್‌ ಆಗಿವೆ..