ಸ್ಪೆಷಲ್ ಸ್ಟೋರಿ

ನಿಮ್ಮ ಮನೆಯಲ್ಲಿದ್ದರು ಸಹ ನೀವು ಡಿಜಿಟಲ್‌ ಅರೆಸ್ಟ್ ಆಗ್ತೀರಾ ಹುಷಾರ್..! ಈ ಡಿಜಿಟಲ್ ಅರೆಸ್ಟ್ ಎಂದರೇನು..?

ನಿಮ್ಮ ಮೇಲೆ ಗಾಂಜಾ ಕೇಸ್ ಇದೆ, ನೀವು ಕೊಲೆ ಮಾಡಿದ್ದೀರಿ ಅಂತ ಹೀಗೆ ಸಾಕಷ್ಟು ಸುಳ್ಳು ವಿಚಾರಗಳನ್ನು ಇಟ್ಟುಕೊಂಡು ಹೆದರಿಸಿ ಬೆದರಿಸಿ ನಿಮಿಷ ನಿಮಿಷಕ್ಕೆ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.

ಬೆಂಗಳೂರು : ಆನ್ ಲೈನ್ ಅರೆಸ್ಟ್ ಅಂದರೇನು? ಡಿಜಿಟಲ್ ಅರೆಸ್ಟ್ ಅಂದರೇಸು? ಇದ್ರಿಂದ ಹೇಗೆ ನಾವು ಪಾರಾಗೋದು..? ಇದೀಗ ಎಲ್ಲಾವು ಸಹ ಡಿಜಿಟಲ್ ಯುಗವಾಗಿದೆ.. ನಮ್ಮ ವೈಯಕ್ತಿಕ ವಿಚಾರಗಳು ಎಲ್ಲಾವು ನಾವು ಅಂದುಕೊಂಡಂತೆ ನಮ್ಮ ಬಳಿಯಲ್ಲಿ ಮಾತ್ರವಿಲ್ಲ.. ನಮ್ಮ ಪರ್ಸನಲ್ ವಿಚಾರಗಳು,ನಮ್ಮ ಬ್ರಾಂಕ್ ಖಾತೆ ಹೀಗೆ ಎಲ್ಲವು ಸಹ ನಾವು ಅಂದುಕೊಂಡಂತಿಲ್ಲ..  ಈ ಸೈಬರ್ ಖದೀಮರು ಎಲ್ಲಿದ್ದಾರೆ, ಎಲ್ಲಿಂದ ಮಾತನಾಡ್ತಾರೆ, ಯಾರಿಗು ಸಹ ಗೊತ್ತಾಗೋದಿಲ್ಲ.. ಹೀಗಾಗಿ ಮನೆಯಲ್ಲಿಯೇ ಇರುವಂತಹ ಅಪರಿಚಿತರಿಗೆ ಡಿಜಿಟಲ್ ಅರೆಸ್ಟ್‌ ಮಾಡುತ್ತಿದ್ದಾರೆ.. ಸುಖಾಸಮ್ಮನೆ ಕೆರೆ ಮಾಡಿ ನಿಮ್ಮ ಮೇಲೆ ಭಯೋತ್ಪಾದನೆ ಆರೋಪವಿದೆ, ನಿಮ್ಮ ಮೇಲೆ ಗಾಂಜಾ ಕೇಸ್ ಇದೆ, ನೀವು ಕೊಲೆ ಮಾಡಿದ್ದೀರಿ ಅಂತ ಹೀಗೆ ಸಾಕಷ್ಟು ಸುಳ್ಳು ವಿಚಾರಗಳನ್ನು ಇಟ್ಟುಕೊಂಡು ಹೆದರಿಸಿ ಬೆದರಿಸಿ ನಿಮಿಷ ನಿಮಿಷಕ್ಕೆ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.‌ ನಮ್ಮ ಮೊಬೈಲ್ ನಂಬರ್..!! ನಮ್ಮ ಅಕೌಂಟ್‌ ನಂಬರ್.. !! ನಮ್ಮ ಸೋಷಿಯಲ್ ಮೀಡಿಯಾ..  ಹೀಗೆ ಅನೇಕ ವಿಚಾರಗಳನ್ನು ನಾವು ಚೋಪಾನ ಮಾಡದಿದ್ದರೇ ನಿಜಕ್ಕು ಸಹ  ಮುಂದೆ ನಾವು ದೊಡ್ಡ ಗಂಡಾತರ ಅನುಭವಿಸೋದಂತು ಗ್ಯಾರಂಟಿ..