ಸ್ಪೆಷಲ್ ಸ್ಟೋರಿ

ದುರಂತಗಳಿಗೆ ಸಾಕ್ಷಿಯಾದ ಕುಂಭಮೇಳ..ನೆಹರು ನೆನಪಿಸುತ್ತಿದೆ ಮೋದಿ ಆಡಳಿತದ ಕಾಲ್ತುಳಿತ..!

ಪುಣ್ಯಸ್ನಾನಕ್ಕೆ ಕುಂಭಮೇಳ ಹೇಗೆ ಫೇಮಸ್ಸೋ ಹಾಗೇ ಹಲವು ದುರಂತರಗಳಿಗೂ ಸಾಕ್ಷಿಯಾಗಿದೆ.. 1954ರ ಕುಂಭಮೇಳ ವಿಚಾರವಾಗಿ ನೆಹರು ಟೀಕಿಸಿದ್ದ ಮೋದಿ, ತಮ್ಮ ಆಡಳಿತದಲ್ಲಿಯೇ ಕಾಲ್ತುಳಿತ ಅವಘಡಕ್ಕೆ ಸಾಕ್ಷಿಯಾಗಿದ್ದಾರೆ..

ಪುಣ್ಯಸ್ನಾನಕ್ಕೆ ಕುಂಭಮೇಳ ಹೇಗೆ ಫೇಮಸ್ಸೋ ಹಾಗೇ ಹಲವು ದುರಂತರಗಳಿಗೂ ಸಾಕ್ಷಿಯಾಗಿದೆ.. 1954ರ ಕುಂಭಮೇಳ ವಿಚಾರವಾಗಿ ನೆಹರು ಟೀಕಿಸಿದ್ದ ಮೋದಿ, ತಮ್ಮ ಆಡಳಿತದಲ್ಲಿಯೇ ಕಾಲ್ತುಳಿತ ಅವಘಡಕ್ಕೆ ಸಾಕ್ಷಿಯಾಗಿದ್ದಾರೆ.. 144 ವರ್ಷಕ್ಕೊಮ್ಮೆ ನಡೆಯುತ್ತಿರುವ ಈಗಿನ ಮಹಾಕುಂಭದಲ್ಲೂ ಘನಘೋರ ದುರಂತ ನಡೆದು ಹೋಗಿದೆ.. ಪುಣ್ಯಪ್ರಾಪ್ತಿಗೆ ಎಂದು ತೆರಳಿದಿದ್ದವರು ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.. ಮೌನಿ ಅಮಾವಾಸ್ಯೆಯಂದೇ ಅಮೃತಸ್ನಾನಕ್ಕೆ ಮುಗಿಬಿದ್ದವರು ದಾರುಣ ಅಂತ್ಯ ಕಂಡಿದ್ದಾರೆ.. ತಮ್ಮವರ ಕಳೆದುಕೊಂಡವರು,, ಯುಪಿ ಸರ್ಕಾರಕ್ಕೆ ಶಾಪ ಹಾಕ್ತಿದ್ದಾರೆ.. ಅವ್ಯವಸ್ಥೆ ವಿರುದ್ಧ ಆಕ್ರೋಶ ಹಾಕಿದ್ದಾರೆ.. ಆದ್ರೆ ನಿಮಗೆ ಗೊತ್ತಿರಲಿ.. ನೂರಾರು ಜನರನ್ನೇ ಬಲಿ ತೆಗೆದುಕೊಂಡ ಇತಿಹಾಸ ಇದೆ ಕುಂಭಮೇಳಕ್ಕೆ ಇದೆ.. ಹಾಗಿದ್ರೆ ಯಾವ ವರ್ಷ ಏನಾಗಿತ್ತು..? ಬಲಿಯಾದವರೆಷ್ಟು..? ನೆಹರು ಕುರಿತು ಮೋದಿ ಆಡಿದ್ದ ಆ ಮಾತಿಗೂ, ಕುಂಭಮೇಳ ದುರಂತಕ್ಕೂ ಇರುವ ನಂಟೇನು ಅನ್ನೋದನ್ನೇ ಹೇಳ್ತೀವಿ ನೋಡಿ..

ಕುಂಭಮೇಳದ ಅಂಗಳದಲ್ಲಿ ನಡೆದ ಮಹಾದುರಂತವನ್ನ 71 ವರ್ಷಗಳಿಂದ ಇತಿಹಾಸ ತನ್ನ ಒಡಲಲ್ಲೇ ಹಾಗೆ ಇಟ್ಟುಕೊಂಡಿದೆ.. ಅದು 1954.. ಉತ್ತರಪ್ರದೇಶದಲ್ಲಿ ಪ್ರಯಾಗರಾಜ್‌ನಲ್ಲಿಯೇ ಅಂದಿನ ಕುಂಭಮೇಳ ಆಯೋಜನೆಯಾಗಿತ್ತು.. 1954ರ ಫೆಬ್ರವರಿ 13 ಮೌನಿಅಮಾವಾಸ್ಯೆಯಂದೇ ಮಹಾ ದುರಂತವೊಂದು ನಡೆದು ಹೋಗಿತ್ತು.. ಅಂದಿನ ಸರ್ಕಾರ, ಜನರ ನಿರ್ಲಕ್ಷ್ಯದಿಂದ ಕಾಲ್ತುಳಿತಕ್ಕೆ ಬರೋಬ್ಬರಿ 800ಕ್ಕೂ ಅಧಿಕ ಭಕ್ತರು ಕೊನೆಯುಸಿರೆಳೆದಿದ್ದರು.. 

ಸ್ವತಂತ್ರ ಭಾರತದಲ್ಲಿ ಆಯೋಜಿಸಿದ್ದ ಕುಂಭಮೇಳ ಕಣ್ತುಂಬಿಕೊಳ್ಳಲು ಅಂದಿನ ಪ್ರಧಾನಿ, ರಾಷ್ಟ್ರಪತಿ ಆಗಮಿಸಿದ್ದರು.. ಡಾ.. ರಾಜೇಂದ್ರ ಪ್ರಸಾದ್ ಅವರು ಪವಿತ್ರ ಸ್ನಾನ ಮಾಡುತ್ತಿದ್ದರೆ, ಪ್ರಧಾನಿ ನೆಹರು ಅವರು ನಿರ್ವಹಣೆಯ ಮೇಲ್ವಿಚಾರಣೆ ನಡೆಸುತ್ತಿದ್ದರು.. ಇದರಿಂದ ಅಂದಿನ ಬಹುತೇಕ ಪೊಲೀಸರು,, ನೆಹರು ಹಾಗೂ ಪ್ರಸಾದ್ ಅವರ ಬೆಂಗಾವಲಾಗಿ ನಿಂತಿದ್ದರು.. ಇಬ್ಬರು ನಾಯಕರ ಸಂಚಾರಕ್ಕೆ ಅಡ್ಡಿಯಾಗದಂತೆ ಎರಡೂ ಕಡೆ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.. ಗಣ್ಯರ ವಾಹನಗಳು ತೆರಳುತ್ತಿದ್ದಂತೆ ಏಕಾಏಕಿ ಜನರು ಮುಗಿಬಿದ್ದಿದ್ದರು.. ಬ್ಯಾರಿಕೇಡ್‌ ತಳ್ಳಿ ಪುಣ್ಯಸ್ನಾನಕ್ಕೆ ಹೊರಟಿದ್ದ ವೇಳೆ ಕಾಲ್ತುಳಿತ ಉಂಟಾಗಿತ್ತು.. ಈ ದುಂತದಲ್ಲಿ ಬರೋಬ್ಬರಿ 800 ಮಂದಿ ಉಸಿರು ಚೆಲ್ಲಿದ್ದು ಘನಘೋರ ದುರಂತವೇ ಸರಿ..

ನಿಮಗೆ ಗೊತ್ತಿರಲಿ.. ಇಂಥಾ ಘನಘೋರ ದುರಂತದ ಹಿಂದೆಯೂ ರಾಜಕೀಯ ವಾಕ್ಸಮರ ನಡೆದಿದ್ದು ಇದೆ..  2019ರಲ್ಲಿ ಕುಂಭಮೇಳದ ಭಾಷಣದ ವೇಳೆ 1954ರ ಮಹಾದುರಂತವನ್ನ ಮೋದಿ ಮೆಲುಕು ಹಾಕಿದ್ದರು.. 2019 ಕುಂಭ ಮೇಳನ್ನು ಯಶಸ್ವಿಯಾಗಿ ಆಯೊಜಿಸಿದ್ದಕ್ಕೆ ಯೋಗಿ ಸರ್ಕಾರವನ್ನು ಹೊಗಳಿ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು.. ಆದ್ರೆ ವಿಪರ್ಯಾಸ ನೋಡಿ ಇದೀಗ ಮೋದಿ ಆಡಳಿತದಲ್ಲಿಯೇ ಕಾಲ್ತುಳಿತಕ್ಕೆ 30ಕ್ಕೂ ಹೆಚ್ಚು ಜನರು ಉಸಿರು ಚೆಲ್ಲಿದ್ದಾರೆ.. ಆರ್ಥಿಕತೆಯಲ್ಲಿ ವಿಶ್ವದಲ್ಲಿಯೇ 5ನೇ ಬಲಿಷ್ಠ ರಾಷ್ಟ್ರ ಎಂದು ಕರೆಸಿಕೊಳ್ಳುವ ಭಾರತದಲ್ಲಿಯೇ ದುರಂತ ನಡೆದುಹೋಗಿದೆ.. ಏನೇನೂ ಬಲಿಷ್ಠವಲ್ಲದ ಸ್ವಾತಂತ್ರ್ಯ ನಂತರ ಭಾರತದಲ್ಲಿ ನಡೆದ ದುರಂತವನ್ನ ನೆಹರೂ ಪ್ರಸ್ತಾಪಿಸಿ ಕಾಂಗ್ರೆಸ್‌ ಟೀಕಿಸಿದ್ದರು.. ಭಾರತ ಇದೀಗ ಟೆಕ್ನಾಲಜಿಯಲ್ಲಿ ಬಲಿಷ್ಠ ಅಂತಾನೇ ಕರೆಸಿಕೊಳ್ಳುತ್ತೆ, ಇಂಥಾ ಸಮಯದಲ್ಲೂ ದಾರುಣವಾಗಿ 30ಕ್ಕೂ ಹೆಚ್ಚು ಮಂದಿ ದುರಂತ ಅಂತ್ಯಕಂಡಿದ್ದಾರೆ.. ಮೌನಿ ಅಮಾವಾಸ್ಯೆ ದಿನ 10 ಕೋಟಿ ಭಕ್ತರು ಬರ್ತಾರೆ ಅಂತಾ ಗೊತ್ತಿದ್ದರೂ, ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಸರ್ಕಾರ ಎಡವಿದೆ ಅನ್ನೋ ಆರೋಪಗಳಿವೆ.. ಜನರು ಕೂಡ ಎಚ್ಚರಿಕೆ ವಹಿಸಬೇಕಿತ್ತು ಅನ್ನೋ ಮಾತುಗಳು ಇವೆ..

ಮಹಾಕುಂಭದಲ್ಲಿ ಕಾಲ್ತುಳಿತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿರೋದಂತು ಸತ್ಯ.. ನೆಹರು ಕಾಲದ ದುರಂತದಂತೇ ಮೋದಿ ಆಡಳಿದ ಅವಘಡವನ್ನೂ ಇತಿಹಾಸ ದಾಖಲಿಸಿಕೊಳ್ಳಲಿದೆ.. 30ಕ್ಕೂ ಹೆಚ್ಚು ಮಂದಿಯನ್ನ ಕಳೆದುಕೊಂಡಿರುವ ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ.. ಪುಣ್ಯಸ್ನಾನಕ್ಕೆ ಹೋಗಿದ್ದವರು ಬಾರದ ಲೋಕಕ್ಕೆ ಹೋಗಿರೋದು ನಿಜಕ್ಕೆ ದುರಂತವೇ ಸರಿ..