ಬೆಂಗಳೂರು : RBI ನಿಂದ ಕೋಟಿ ಹಣ ಬಂದಿದೆ ನಾವು ಮಾಡೋದು ರೈಸ್ ಪುಲ್ಲಿಂಗ್ ದಂಧೆ. ಬೇಕಾದವ್ರು RBI ನಿಂದ ಬಂದಿರೋ ಲೆಟರನ್ನ ನೋಡಬಹುದು. ಹೀಗೆ ಹೇಳಿ ನೂರಾರು ಜನರಿಗೆ ಮೋಸ ಮಾಡುತ್ತಿರುವ ಗ್ಯಾಂಗ್ ಇದೀಗ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಆ್ಯಕ್ಟಿವ್ ಆಗಿದೆ.
ತಾವು ರೈಸ್ ಪುಲ್ಲಿಂಗ್ ಎಂಬ ವಸ್ತುವನ್ನ ವಿದೇಶಕ್ಕೆ ಮಾರಾಟ ಮಾಡಿದ್ದೇವೆ. ಅಲ್ಲಿಂದ ನಮಗೆ ಸಾವಿರಾರು ಕೋಟಿ ಹಣ ಜಮಾ ಆಗಿದೆ. ಜಮಾ ಆಗಿರೋ ಹಣ RBI ಗೆ ಬಂದು ಸೇರಾಗಿದೆ. ನಮಗೆ ತಲುಪಿರೋ ಹಣವನ್ನ ಸಾಕಷ್ಟು ಜನರಿಗೆ ಅಗ್ರಿಮೆಂಟ್ ಹಾಕಿಸಿಕೊಂಡು ಅವರ ಬ್ಯಾಂಕ್ ಖಾತೆಗೂ ಹಾಕಿದ್ದೇವೆ. ಒಂದು ವೇಳೆ ಕೋಟಿಯನ್ನ ತಿಂಗಳಲ್ಲೇ ದುಡೀಬೇಕು ಅಂದ್ರೆ ನಮ್ಮ ಜತೆ ಒಪ್ಪಂದಕ್ಕೆ ಬನ್ನಿ ದಾಖಲೆಗಳನ್ನ ನಾವು ರೆಡಿ ಮಾಡಿ ನಿಮ್ಮ ಅಕೌಂಟ್ ಗೆ ಬರುವಂತೆ ಮಾಡ್ತೀವಿ ಅಂತ ನಂಬಿಸ್ತಾರೆ. ಒಂದು ವೇಳೆ ನಂಬಿ ಅಗ್ರಿಮೆಂಟ್ ಹಾಕಿಕೊಂಡಿದ್ದೇ ಹೌದಾದ್ರೆ ನಿಮ್ಮ ಬಳಿ ಪ್ರೊಸೆಸಿಂಗ್ ಹಾಗೂ ಅಧಿಕಾರಿಗಳ ಬಾಯಿಗೆ ಹಣ ಸುರೀಬೇಕು ಅಂತ ಕೋಟಿ ಕೋಟಿ ವಂಚಿಸಿ ಮೊಬೈಲ್ ಸ್ವಿಚ್ ಆಫ್ ಮಾಡ್ಕೋಳ್ತಾರೆ ವಂಚಕರು.

ಈ ರೈಸ್ ಪುಲ್ಲಿಂಗ್ ಗ್ಯಾಂಗ್ ನ ಲೀಡರ್ ಶ್ರೀಕಾಂತ್ ನಂಜೇಗೌಡ,ಭುವನ ಚಂದ್ರ ಹಾಗೂ ತಸೀಮ್ ಅಲಿ ಖಾನ್. ಈಗಾಗಲೇ ಈ ವಂಚಕರ ಗ್ಯಾಂಗ್ ಮೇಲೆ ಹತ್ತಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ವೇಳೆ ಈ ಗ್ಯಾಂಗ್ ನಿಮ್ಮ ಬಳಿಯೂ ರೈಸ್ ಪುಲ್ಲಿಂಗ್ ಕೋಟಿ ವಿಚಾರದ ಬಗ್ಗೆ ಹೇಳೋಕೆ ಹೋದ್ರೆ ಹಣವನ್ನ ಇನ್ವೆಸ್ಟ್ ಮಾಡಿವ ಬದುಲು ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ.