ಸ್ಪೆಷಲ್ ಸ್ಟೋರಿ

ಬಿಗ್ ಬಾಸ್ ಕನ್ನಡ: ಅಣ್ಣ ತಂಗಿ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಮಂಜಣ್ಣ..

ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸದಸ್ಯರು ಅಣ್ಣ ಅಂತಾ ಕರೆಯೋದು ಇಬ್ಬರನ್ನೇ ಒಂದು ಸುರೇಶಣ್ಣ ಹಾಗೂ ಮಂಜಣ್ಣ, ಆದ್ರೆ ಇಲ್ಲಿ ಮಂಜು ಆ ಒಬ್ಬ ಮಹಿಳಾ ಸದಸ್ಯೆಗೆ ಮಂಜಣ್ಣ ಅಂತಾ ಕರೀಬೇಡಿ ಎಂದಿದ್ದಾರೆ, ಯಾರದು..?

ಬಿಗ್ ಬಾಸ್ ಮನೆ ಕೆಲವೊಮ್ಮೆ ಶಾಂತವಾಗಿರುತ್ತೆ, ಇನ್ನೂ ಕೆಲವೊಮ್ಮೆ ಟಾಸ್ಕ್ ಕೊಟ್ಟಾಗ ಹೈವೋಲ್ಟೇಜ್ ಆಗಿಬಿಡುತ್ತೆ, ಆದ್ರೆ ಯಾವಾಗ್ಲೂ ಕಿಚ್ಚು ಹೆಚ್ಚಾಗೋದು ಅಂದ್ರೆ ಎಲಿಮಿನೇಷನ್ ಪ್ರೊಸಸ್ ಸಂದರ್ಭದಲ್ಲಿ ಮಾತ್ರ ಹೌದು, ಈ ವಾರದ ಎಲಿಮಿನೇಷನ್ ಪ್ರೊಸಸ್ ಈಗಾಗ್ಲೇ ಶುರುವಾಗಿದೆ, ಬಿಗ್ ಮನೆಯಲ್ಲಿ ಈ ವಾರ ಯಾರ್ಯಾರು ನಾಮಿನೇಟ್ ಆಗ್ತಾರೆ ಅನ್ನೋ ಕುತೂಹಲವೂ ಇತ್ತು, ಇದರ ಮಧ್ಯೆ ಐಶ್ವರ್ಯ ಮತ್ತು ಉಗ್ರಂ ಮಂಜು ಮಧ್ಯೆ ಮಾತಿನ ಚಕಮಕಿ ನಡೆದಿದೆ, ಐಶ್ವರ್ಯ ಹೇಳಿದಿಷ್ಟೇ, ಮಂಜು ಹೆಚ್ಚಾಗಿ ಗೌತಮಿ ಜೊತೆ ಮಾತ್ರ ಮಾತನಾಡುತ್ತಾರೆ, ಅವರಿಬ್ಬರ ಮಧ್ಯೆ ಬೌಂಡರಿ ಹಾಕೊಂಡಿದ್ದಾರೆ, ನಮಗೆ ಮಾತನಾಡೋದಕ್ಕೆ ಅವಕಾಶವೇ ಇರಲ್ಲ, ಹಾಗಾಗಿ ನಾನು ಮಂಜಣ್ಣನನ್ನ ನಾಮಿನೇಟ್ ಮಾಡ್ತಿದ್ದೀನಿ ಅಂತೇಳಿ ಹೇಳಿಕೆ ಕೊಟ್ಟಿದ್ರು..


ಅಣ್ಣ ಅಣ್ಣ ಅಂತೀಯಾ ಆದ್ರೆ ನಾಮಿನೇಷನ್ಗೆ ಬಂದಾಗ ನನ್ನ ಹೆಸರು ತಗೊಂಡಿದ್ದೀಯಾ, ಇದು ಸರಿಯಾದ ಕಾರಣ ಅಲ್ಲವೇ ಅಲ್ಲ ಅಂದಿದ್ದಾರೆ, ಇಲ್ಲಿ ಐಶ್ವರ್ಯ ಹಾಗೂ ಮಂಜು ಇದೇ ವಿಚಾರಕ್ಕೆ ವಾಗ್ವಾದ ಮಾಡ್ತಾರೆ, ಇದು ಮುಂದುವರೆದಂತೆ ಇನ್ಮುಂದೆ ನೀನು ನನ್ನನ್ನು ಮಂಜಣ್ಣ ಅಂತಾ ಕರೀಬೇಡ, ಮಂಜು ಅಥವಾ ಮಂಜ ಅಂತಾ ಕರಿ ಸಾಕು ಎಂದಿದ್ದಾರೆ