ಸ್ಪೆಷಲ್ ಸ್ಟೋರಿ

19 ವರ್ಷದ ಬಳಿಕ ಬಾಕ್ಸಿಂಗ್ ಅಖಾಡಕ್ಕೆ ಮೈಕ್ ಟೈಸನ್..!

19 ವರ್ಷದ ಬಳಿಕ ಮತ್ತೆ ಬಾಕ್ಸಿಂಗ್ ರಿಂಗ್​​ ನಲ್ಲಿ ಮೈಕ್ ಟೈಸನ್ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ 19 ವರ್ಷದ ಬಳಿಕ, ಮತ್ತೆ ಬಾಕ್ಸಿಂಗ್ ರಿಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿದೆ. ಈ ಮ್ಯಾಚ್ ಟೆಕ್ಸಾಸ್ನ ಆರ್ಲಿಂಗ್ಟನ್ ನಲ್ಲಿರುವ ಎಟಿ&ಟಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. 58 ವರ್ಷದ ಮೈಕ್ ಟೈಸನ್ 27 ವರ್ಷದ ಎದುರಾಳಿಯೊಂದಿಗೆ ಗುದ್ದಾಡಲು ಸಜ್ಜಾಗಿದ್ದಾರೆ. ಬಾಕ್ಸಿಂಗ್ ಲೋಕದಲ್ಲಿ ಪ್ರಭಾವಶಾಲಿ ದಾಖಲೆಗಳನ್ನು ಹೊಂದಿರುವ ಟೈಸನ್, ಕಳೆದ 27 ವರ್ಷಗಳಿಂದ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿರಲಿಲ್ಲ.