ವಿದೇಶ

ಗಾಂಧಿಯವರಿಗೆ ಗೌರವ ಸಲ್ಲಿಸಿ ಶಾಂತಿ ಮಂತ್ರ ಪಠಿಸಿದ ಮೋದಿ

50 ವರ್ಷಗಳ ನಂತರ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ಎನ್ನುವ ಇತಿಹಾಸ ನಿರ್ಮಿಸಿದ್ದಾರೆ ನರೇಂದ್ರ ಮೋದಿ

ಶಾಂತಿ ಮತ್ತು ಪ್ರಗತಿಗಾಗಿ ಜಾಗತಿಕ ಮಂತ್ರ ಪಠಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಜಾಪ್ರಭುತ್ವ ಮತ್ತು ಮಾನವೀಯತೆ ಮೊದಲು ಎಂದು ಪ್ರತಿಪಾದಿಸಿದ್ದಾರೆ.50 ವರ್ಷಗಳ ನಂತರ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ಎನ್ನುವ ಇತಿಹಾಸ ನಿರ್ಮಿಸಿರುವ ನರೇಂದ್ರ ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ, ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಿ ಶಾಂತಿ,ಮತ್ತು ಪ್ರಗತಿಯ ಮಂತ್ರಪಠಿಸಿದ್ದಾರೆ.
ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐದು ದಿನಗಳ ಯಶಸ್ವಿ ಮತ್ತು ಫಲಪ್ರಧ ಭೇಟಿ ಮುಗಿಸಿ ಸ್ವದೇಶದತ್ತ ವಾಪಸ್ಸಾಗಿದ್ದಾರೆ.52 ವರ್ಷಗಳ ಬಳಿಕ ಭಾರತ-ಕೆರಿಬಿಯನ್ ಸಮುದಾಯ ಶೃಂಗಸಭೆಯ ಸಹ-ಅಧ್ಯಕ್ಷತೆ, ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು ಮತ್ತು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು.
ನವೆಂಬರ್ 17 ರಂದು ನೈಜೀರಿಯಾಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ಮೋದಿ ತಮ್ಮ ಮೂರು ರಾಷ್ಟ್ರಗಳ ಪ್ರವಾಸವನ್ನು ಪ್ರಾರಂಭಿಸಿದರು, ೧೭ ವರ್ಷಗಳ ನಂತರ ಪಶ್ಚಿಮ ಆಫ್ರಿಕಾದ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ಪ್ರವಾಸ ಇದಾಗಿತ್ತು.ಪ್ರಸಾಸದ ಸಮಯದಲ್ಲಿ, ಅವರು ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದ್ದಾರೆ