ಸಿಎಂ ವಿರುದ್ಧದ ಮುಡಾ ಹಗರಣ ಸಂಬಂಧ ED ತನಿಖೆ ಮಧ್ಯೆ ಲೋಕಾಯುಕ್ತ ವಿಚಾರಣೆಯೂ ವೇಗ ಪಡೆದಿದೆ.. ಅಕ್ರಮವಾಗಿ ಸೈಟ್ ಹಂಚಿಕೆ ಆರೋಪದಲ್ಲಿ ಮುಡಾ ಮಾಜಿ ಆಯುಕ್ತ ನಟೇಶ್ ವಿಚಾರಣೆ ಎದುರಿಸಿದ್ದಾರೆ.. ಸಿಎಂ ಪತ್ನಿಗೆ 14 ನಿವೇಶನ ನೀಡಿದ್ದ ಸಂಬಂಧ ಲೋಕಾಯುಕ್ತ ಮಾಹಿತಿ ಪಡೆದಿದೆ..
ನಾನೇನು ಡ್ಯಾನ್ಸ್ ಮಾಡ್ತಿದ್ದೀನಾ? ನಟೇಶ್ ಸಿಟ್ಟು..!
ಲೋಕಾಯುಕ್ತ ವಿಚಾರಣೆಗೆ ಹಾಜರಾಗ್ತಿದ್ದ ವೇಳೆ ನಟೇಶ್ ಮಾಧ್ಯಮಗಳ ಮೇಲೆಯೇ ಗರಂ ಆಗಿದ್ದಾರೆ.. ನಾನೇನು ಡ್ಯಾನ್ಸ್ ಮಾಡ್ತಿದ್ದೀನಾ, ಯಾಕೆ ವಿಡಿಯೋ ತೆಗೆಯುತ್ತಿದ್ದೀರಾ ಅಂತಾ ಸಿಟ್ಟಾಗಿದ್ದಾರೆ.. ಆತಂಕದಲ್ಲಿಯೇ ವಿಚಾರಣೆಗೆ ಬಂದಿದ್ದ ವೇಳೆ ಕ್ಯಾಮೆರಾ ಕಾಣ್ತಿದ್ದಂತೆ ನಟೇಶ್ ಗರಂ ಆದ ಘಟನೆ ನಡೆದಿದೆ..
ನಟೇಶ್ ಬಂಧಿಸುವಂತೆ ಗಂಗರಾಜು ಒತ್ತಾಯ..!
ಸಿಎಂ ಪತ್ನಿಗೆ ಅಣ್ಣನಿಂದ ಜಮೀನು ದಾನವಾಗಿ ಬಂದಿಲ್ಲ, ಮಾರಾಟ ಎಂದು ನಮೂದಿಸಲಾಗಿದೆ ಅಂತಾ ಆರ್ಟಿಐ ಕಾರ್ಯಕರ್ತ ಗಂಗರಾಜು ಆರೋಪ ಮಾಡಿದ್ದಾರೆ.. ತಂಗಿಗೆ ದಾನವಾಗಿ ನೀಡಿದ್ದು ಎಂದು ಹೇಳಲಾಗಿದೆ, ಆದ್ರೆ ಇದು ಸುಳ್ಳು.. ಹಿಂದಿನ ಮುಡಾ ಆಯುಕ್ತ ನಟೇಶ್ ಬಂಧಿಸುವಂತೆ ಒತ್ತಾಯಿಸಿದ್ದಾರೆ..