ಬೆಳಗಾವಿ : ವಕ್ಫ್ ಭೂಮಿ ಚರ್ಚೆ ವಿವಾದ ಇದೀಗ ಬೆಳಗಾವಿಗೂ ಕಾಲಿಟ್ಟಿದ್ದು, ಹಬ್ಬ ಸಂಭ್ರಮದಲ್ಲಿರುವ ಕುಂದಾನಗರಿಯ ರೈತರಿಗೆ ವಕ್ಫ್ ಬೋರ್ಡ್ ಶಾಕ್ ಕೊಟ್ಟಿದೆ. ಒಟ್ಟು 30 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ 10 ರೈತ ಕುಟುಂಬಗಳು ಹಾಗೂ ಮೂಡಲಗಿ ತಾಲೂಕಿನ 20 ರೈತರ ಪಹಣಿ ಪತ್ರದಲ್ಲಿ ವಕ್ಫ್ ಎಂದು ಉಲ್ಲೇಖಿಸಲಾಗಿದ್ದು, ವಕ್ಫ್ ಬೋರ್ಡ್ ಹೊಡೆತಕ್ಕೆ ರೈತರು ದಂಗಾಗಿದ್ದಾರೆ. ರೈತರಾದ, ರಾಕೇಶ ಕೋಳಿಗೆ ಸೇರಿದ 1 ಎಕರೆ 5 ಗುಂಟೆ ಜಮೀನು, ಮಹಾವೀರ ಬಡಿಗೇರ ಕುಟುಂಬಕ್ಕೆ ಸೇರಿದ 2 ಎಕರೆ, ಸುನೀಲ ಮುಜಾವರಗೆ ಸೇರಿದ 1 ಎಕರೆ 31 ಗುಂಟೆ ಜಮೀನು, ಸುಮಿತ್ರಾ ಮುಜಾವರ್ ಗೆ ಸೇರಿದ 1.36 ಎಕರೆ, ಸುಭಾಷ ಭೀಮರಾಯಿಗೆ ಸೇರಿದ 5 ಗುಂಟೆ, ಬಾಬು ಮಾಲಗಾರಗೆ 30 ಗುಂಟೆ,ಬಾಬು ಮುಜಾವರ್‌ಗೆ ಸೇರಿದ 2 ಎಕರೆ, ದ್ವಾರಪಾಲ್ ಗೌರಾಜ್ 2.2 ಎಕರೆ ಸಾತಪ್ಪ ಮಾಳಿಗೆ ಸೇರಿದ 2.15 ಎಕರೆ, ರಾಜು ಮುಜಾವರಗೆ ಸೇರಿದ 2.10 ಎಕರೆ ಜಮೀನಿಗೆ ವಕ್ಫ್ ಬೋರ್ಡ್ ಕನ್ನಹಾಕಿದ್ದು ರೈತರು ಕಂಗಾಲಾಗಿದ್ದಾರೆ.
ಆದರೆ ವಕ್ಫ್ ಬೋರ್ಡ್ ವಕ್ರದೃಷ್ಠಿಗೆ ಬೆಳಗಾವಿ ಜಿಲ್ಲೆಯ ರೈತರು ದಂಗಾಗಿದ್ದಾರೆ. ಹೀಗಾಗಿ ಆದಷ್ಟು ಬೇಗ ವಕ್ಫ್ ಎಂದು ನಮೂಸಿದಲಾಗಿರುವ ಹೆಸರನ್ನು ವಾಪಸ್ ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.