ಪಶ್ಚಿಮಘಟ್ಟ ಪ್ರದೇಶದಲ್ಲಿ ಗುಂಡಿನ ಸದ್ದು ಮೊಳಗಿದೆ.. ಉಡುಪಿಯ ಕಬ್ಬಿನಾಲೆ ವ್ಯಾಪ್ತಿಯಲ್ಲಿ ನಕ್ಸಲ್ ನಾಯಕನನ್ನ ಹೊಡೆದುರುಳಿಸಲಾಗಿದೆ..ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂಗೌಡ ಉಸಿರು ಚೆಲ್ಲಿದ್ದಾನೆ.. ANF ಕಾರ್ಯಾಚರಣೆ ವೇಳೆ ಮೂವರು ಎಸ್ಕೇಪ್ ಆಗಿದ್ದು, ಶೋಧ ಮುಂದುವರೆದಿದೆ..
ದಾಳಿಗೆ ಯತ್ನಿಸಿದ ವೇಳೆ ನಕ್ಸಲ್ ಎನ್ಕೌಂಟರ್
ANF ಕಾರ್ಯಾಚರಣೆ ವೇಳೆ ನಕ್ಸಲ್ ವಿಕ್ರಂಗೌಡ ದಾಳಿ ಮಾಡಲು ಯತ್ನಿಸಿದ್ದಾನೆ, ಈ ವೇಳೆ ಪ್ರತಿದಾಳಿಯಲ್ಲಿ ಮೃತಪಟ್ಟಿದ್ದಾನೆ ಅಂತಾ ಪರಮೇಶ್ವರ್ ಹೇಳಿದ್ದಾರೆ.. ವಿಕ್ರಮ್ ಗೌಡ ಜೊತೆ ಇನ್ನೂ ಮೂವರು ಇದ್ದರು, ಅವರೆಲ್ಲಾ ಪರಾರಿಯಾಗಿದ್ದು, ಬೆಳ್ತಂಗಡಿ ಸೇರಿ ವಿವಿಧೆಡೆ ಕೂಬಿಂಗ್ ಕಾರ್ಯ ನಡೆಯುತ್ತಿದೆ..
ನಕ್ಸಲರು ಎಡಪಂಥೀಯ ಭಯೋತ್ಪಾದಕರು
ನಕ್ಸಲ್ ಲೀಡರ್ ವಿಕ್ರಂಗೌಡ ಎನ್ಕೌಂಟರ್ ಬಗ್ಗೆ ಎಂಎಲ್ಸಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.. ನಕ್ಸಲಿಸಂ ಅನ್ನೋದು ಸಂವಿಧಾನ ವಿರೋಧಿ, ಅವರ ಬಗ್ಗೆ ಯಾವುದೇ ಸಹಾನುಭೂತಿ ಇರಬಾರದು ಎಂದಿದ್ದಾರೆ.. ನಕ್ಸಲರು ಎಡಪಂಥೀಯ ಭಯೋತ್ಪಾದಕರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಅಂತಾ ಕಿಡಿಕಾರಿದ್ದಾರೆ..