ಸ್ಪೆಷಲ್ ಸ್ಟೋರಿ

ಮೊದಲ ದಿನವೇ ಬಿಗ್ ಬಾಸ್​​​​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಶೋಭಾ ಶೆಟ್ಟಿ..

ಬಿಗ್ ಬಾಸ್ ಸೀಸನ್ 11ರ ಬಿಗ್ ವೇದಿಕೆಗೆ ಎರಡು ವೈಲ್ಡ್ ಕಾರ್ಡ್ ಎಂಟ್ರಿಯಿಂದ ಮನೆ ಹೊಸ ರೂಪ ಪಡೆದಿದೆ, ಇಲ್ಲಿ ವಿರೋಧಿಗಳು ಸ್ನೇಹಿತರಾಗಿದ್ದಾರೆ..ಸ್ನೇಹಿತರು ವಿರೋಧಿಗಳಾಗಿದ್ದಾರೆ

ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ನಲ್ಲಿ ಮೊದಲು ಎಂಟ್ರಿಯಾಗಿದ್ದು ಹನುಮಂತು, ಹನುಮಂತುವಿನ ಆಟ ಎಲ್ಲರಿಗೂ ಇಷ್ಟವಾಗಿದೆ, ಇದರ ಸಲುವಾಗೇ ಇರಬೇಕು, 50 ದಿನಗಳ ನಂತರ ಬಿಗ್ ಬಾಸ್ನಲ್ಲಿ ಎರಡು ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ, ಬಿಗ್ ಮನೆಗೆ ಕಿರುತೆರೆ ನಟ ರಜತ್ ಹಾಗೂ ಈ ಹಿಂದೆ ತೆಲುಗು ಬಿಗ್ ಬಾಸ್ಗೆ ಹೋಗಿ ಬಂದಿದ್ದ ಕನ್ನಡತಿ ಶೋಭಾ ಶೆಟ್ಟಿಯ ಎಂಟ್ರಿಯಿಂದ ಮತ್ತೆ ಮನೆಯಲ್ಲಿ ಕಿಚ್ಚು ಹೊತ್ತಿಸಿದೆ..
 ಶೋಭಾ ಶೆಟ್ಟಿ ಎಂಟ್ರಿಯಿಂದ ಮನೆ ಒಂದು ಕ್ಷಣ ದಂಗಾಗಿದೆ, ಅಷ್ಟಕ್ಕೂ ಅವರು ಬಂದಿದ್ರಿಂದ ಅಲ್ಲವೇ ಅಲ್ಲ ಬದಲಾಗಿ, ಅವರ ಚುರುಕಾದ ಮಾತಿನಿಂದ ಬಿಗ್ ಮನೆ ನಿಜಕ್ಕೂ ಶಾಕ್ ಆಗಿದೆ, ಒಂದು ರೀತಿಯಲ್ಲಿ ನೋಡೋದಾದ್ರೆ ಬಿಗ್ ಮನೆಗೆ ಎಂಟ್ರಿ ಕೊಡ್ತಿದ್ದಂತೆ ಗೌತಮಿ, ಹೌದು ಮಂಜು ರವರನ್ನ ಟಾರ್ಗೆಟ್ ಮಾಡಿದ್ದ ಶೋಭಾ, ತೆಂಗಿನ ಕಾಯಿ ಟಾಸ್ಕ್ನಲ್ಲಿ ಗೌತಮಿ ಮುಖವಾಡ ಹಾಕ್ಕೊಂಡ್ ಆಟ ಆಡ್ತಿದ್ದಾರೆ ಅಂದಿದ್ದು, ಗೌತಮಿಗೆ ಶಾಕ್ ಕೊಟ್ಟಿದೆ, ಮತ್ತೊಂದು ಕಡೆ ಬಿಗ್ ಮನೆಯಲ್ಲಿ ಮಂಜು ಹಾಗೂ ಶೋಭಾ ಮಧ್ಯೆ ದೊಡ್ದ ಹೈಡ್ರಾಮ ನಡೆದಿದೆ

ಮಂಜು ಶೋಭಾ ಅವರಿಗೆ ಆಟದ ನಿಯಮವನ್ನ ಅಲ್ಲಾಡಿಸಿದ್ರು ಅಂತಾರೆ ಇದಕ್ಕೆ ಉತ್ತರ ಕೊಟ್ಟ ಶೋಭಾ ಅಲ್ಲಾಡಿಸೋದಕ್ಕೆ ಗಿಲ್ಲಾಡಿಸೋದಕ್ಕೆ WHAT..? ಎಂದು ಕೇಳಿದ್ದಾರೆ, ಮಂಜು ಕ್ಲ್ಯಾರಿಟಿ ಕೊಡ್ತೀನಿ ಅಂದಾಗ, ಶೋಭಾ ಅಕ್ಷರಶಃ ಕೆರಳಿ ಕೆಂಡವಾಗಿ ಮಂಜು ವಿರುದ್ಧವೇ ತಿರುಗಿ ಬಿದ್ದಿದ್ದಾರೆ..