ಸ್ನೇಹಿತರೇ ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ ಅವರು ಮೈದಾನದ ಒಳಗೆ ಮತ್ತು ಹೊರಗೆ ತಮ್ಮ ಅದ್ಭುತವಾದ ಸ್ಪಿರೀಟ್‌ಗೆ ಸಖತ್ ಫೇಮಸ್, ರೈಲ್ವೇಸ್ ಆಲ್‌ರೌಂಡರ್ ಹಾಗೂ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಯಾವುದೇ ಸಂದರ್ಭಗಳಲ್ಲೂ ಹಿಂದೆ ಸರಿಯದೇ ತಮ್ಮ ನಿರ್ಧಾರದ ಗಟ್ಟಿತನಕ್ಕೆ ಹೆಸರುವಾಸಿಯಾದವರು. ಆದರೆ ಈಗ ಅವರ ಪುತ್ರ ಆರ್ಯನ್ ಬಂಗಾರ್ ಅವರು ಲಿಂಗ ಪರಿವರ್ತನೆ ಮಾಡುವ ಮೂಲಕ ಅನಾಯಾ ಬಂಗಾರ್ ಆಗಿ ಬದಲಾಗಿದ್ದಾರೆ.
ಕ್ರಿಕೆಟ್‌ನಲ್ಲಿ ತಂದೆಯಂತೆ ಅತೀವ ಆಸಕ್ತಿ ಹೊಂದಿರವ ಅನಾಯಾ ಬಂಗಾರ್ ಅವರು ಟ್ರಾನ್ಸ್‌ವುಮೆನ್ ಕ್ರಿಕೆಟರ್ ಆಗಲು ಬಯಸಿದ್ದಾರೆ. ಆರ್ಯನ್ ಅಥವಾ ಅನಾಯಾ, ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಅದಕ್ಕಾಗಿ ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಲಿಂಗ ರೂಪಾಂತರಕ್ಕಾಗಿ 10 ತಿಂಗಳ ಹಾರ್ಮೋನ್ ರೂಪಾಂತರ ಕಾರ್ಯವಿಧಾನದ ಹಾಗೂ ಅದರ ಪರಿಣಾಮಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ..ಶಸ್ತ್ರಚಿಕಿತ್ಸೆಯ ಸುಮಾರು 11 ತಿಂಗಳ ನಂತರ, ಕ್ರಿಕೆಟಿಗನ ಪುತ್ರ ತನ್ನನ್ನು ಅರ್ಯನ್ ಬದಲಾಗಿ ಅನಾಯಾ ಎಂದು ಗುರುತಿಸಿಕೊಂಡಿದ್ದಾಳೆ. ಮಗಳಾಗಿ ಬದಲಾಗಿರುವ ಅನಯಾ ತಂದೆಯಂತೆ, ಈಗ ಎಡಗೈ ಬ್ಯಾಟರ್ ಆಗಿದ್ದಾರೆ ಮತ್ತು ಸ್ಥಳೀಯ ಕ್ಲಬ್ ಕ್ರಿಕೆಟ್‌ನಲ್ಲಿ ಇಸ್ಲಾಂ ಜಿಮ್ಖಾನಾ ತಂಡದ ಪರ ಆಡುತ್ತಿದ್ದರು. ಇದರ ಜೊತೆ ಲೀಸೆಸ್ಟರ್‌ಶೈರ್‌ನ ಹಿಂಕ್ಲೆಯ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸಿ ಟನ್‌ಗಳಷ್ಟು ರನ್ ಗಳಿಸಿದ್ದಾರೆ ಈ ಅನಾಯಾ..