ಸ್ಪೆಷಲ್ ಸ್ಟೋರಿ
8 ವರ್ಷ ಆಯ್ತು ಕೊಲೆ ಮಾಡಿದ ಖತರ್ನಾಕ್ ಗಳ ಸುಳಿವು ಮಾತ್ರ ಪೊಲೀಸರಿಗೆ ಸಿಕ್ಕಿಲ್ಲ
ಬೆಂಗಳೂರು : ಆ ಒಂದು ಪ್ರಕರಣ ನಡೆದು 8 ವರ್ಷವೇ ಕಳೆದಿದೆ.. ಆದ್ರೆ ಆ ಆರೋಪಿಗಳ ಸುಳಿವು ಮಾತ್ರ ಇನ್ನು ಸಿಕ್ಕಿಲ್ಲ.
ಬೆಂಗಳೂರು : ಆ ಒಂದು ಪ್ರಕರಣ ನಡೆದು 8 ವರ್ಷವೇ ಕಳೆದಿದೆ.. ಆದ್ರೆ ಆ ಆರೋಪಿಗಳ ಸುಳಿವು ಮಾತ್ರ ಇನ್ನು ಸಿಕ್ಕಿಲ್ಲ.. ಎಂದೆಂಥಾ ಖರ್ತನಾಕ್ ಗಳು ಎಂತೆಂಥಾ ಉಗ್ರರನ್ನೆ ಬಗ್ಗು ಬಡಿದಿರುವ ಬೆಂಗಳೂರು ಪೊಲೀಸರಿಗೆ 8 ವರ್ಷಗಳಾದ್ರು ಸಹ ಇನ್ನು ಆ ಖತರ್ನಾಕ್ ಆರೋಪಿಗಳು ಮಾತ್ರ ಇನ್ನು ಸಿಕ್ಕಿಲ್ಲ.. ಹೌದು.. 2016_ರಲ್ಲಿ ಸಂಜಯ್ ನಗರದಲ್ಲಿ ನಡೆದಂತಹ ಶೂಟೌಟ್ ಪ್ರಕರಣವದು, ಆದ್ರೆ ಇದುವರೆಗೂ ಆ ಬಗ್ಗೆ ಯಾವುದೇ ಸುಳಿವು ಮಾತ್ರ ಸಿಕ್ತಾಯಿಲ್ಲ.. ಯೆಸ್.. ಸುರೇಂದ್ರ ರೆಡ್ಡಿ ಎಂಬಾತನನ್ನು ಆತನ ಮನೆ ಎದುರಲ್ಲಿಯೇ ಗುಂಡಿಟ್ಟು ಕೊಂದಿದ್ದರು ಹಂತಕರು.. ಇನ್ನು ಸುರೇಂದ್ರ ರೆಡ್ಡಿ ಯಾರು ಅಂತ ನೋಡೋದಾದ್ರೆ ಆತ ಓರ್ವ ಬ್ಯುಸಿನೆಸ್ ಮ್ಯಾನ್, ಹೆಬ್ಬಾಳದಲ್ಲಿ ಒಂದು ಆಫೀಸ್ ಹೊಂದಿದ್ದ.. ರಿಯಲ್ ಎಸ್ಟೇಟ್, ಲೋನ್, ಹೀಗೆ ಅನೇಕ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದ ಈ ರೆಡ್ಡಿ 2016ರ ನವೆಂಬರ್, ದೀಪಾವಳಿ ಹಬ್ಬದಂದು ಎಂದಿನಂತೆ ಸಂಜಯ್ ನಗರದ ಮನೆಗೆ ಬಂದಿದ್ದ.. ಇನ್ನೇನು ಕಾರಿನಿಂದ ಇಳಿದು ಮನೆಯೊಳಗಡೆ ಹೋಗಬೇಕು ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಇಬ್ಬರು ಆರೋಪಿಗಳು ಸುರೇಂದ್ರ ರೆಡ್ಡಿಗೆ ಆರು ಸುತ್ತು ಗುಂಡು ಹಾರಿಸಿ ಅಲ್ಲಿಂದ ಮಿಂಚಿನ ರೀತಿಯಲ್ಲಿ ಎಸ್ಕೇಪ್ ಆಗಿದ್ರು.. ಇನ್ನು ವಿಪರ್ಯಾಸ ಅಂದ್ರೆ ಅಂದು ದೀಪಾವಳಿ ಆಗಿದ್ದರಿಂದ ಅಲ್ಲಿ ಗುಂಡಿನ ಸದ್ದನ್ನು ಅಕ್ಕಪಕ್ಕದ ಮನೆಯವರೆಲ್ಲಾ ಪಟಾಕಿ ಸದ್ದು ಅಂತ ಸುಮ್ಮನಾಗಿದ್ರು.. ಯಾವಾಗ ಸುರೇಂದ್ರ ರೆಡ್ಡಿ ರಕ್ತವು ನೀರಿನಂತೆ ರಸ್ತೆಗೆ ಹರಿದಿತ್ತೋ, ಆಗಲೇ ಅಲ್ಲಿನ ಸ್ಥಳಿಯರು ಬೆಚ್ಚಿ ಬಿದ್ದು ತಕ್ಷಣ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.. ಆಗ ಸಂಜಯ್ ನಗರ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಬೆಚ್ಚಿ ಬಿದ್ದಿದ್ರು.. ಇನ್ನು ಘಟನೆಗೆ ಸಾಕಷ್ಟು ಕಾರಣಗಳು ಪೊಲೀಸರ ತನಿಖೆಯಲ್ಲಿ ಹೊರಬಂದಿತ್ತು.. ಸಲಿಂಗ ಕಾಮದ ಕೆಲವಿಚಾರಗಳು ಆತನ ವಿರುದ್ಧ ಕೇಳಿಬಂದಿತ್ತು.. ಅಷ್ಟೇ ಅಲ್ಲದೇ ಸಾಕಷ್ಟು ಜನರಿಗೆ ಲೋನ್ ಕೊಡಿಸೋದಾಗಿ ಯಾವಾರಿಸಿದ್ದಾನೆಂದು ಕೆಲವರು ಹೇಳಿದ್ದರು, ಇದರ ನಡುವೆ ಕೆಲ ಬ್ಯುಸಿನೆಸ್ ರೈವಲ್ರಿ ಕೂಡ ಇತ್ತು ಅಂತಾನು ಅಂದುಕೊಂಡಿದ್ರು.. ಆದ್ರೆ ಪೊಲೀಸರು ಮಾತ್ರ ಎಲ್ಲಾ ಆಯಾಮದಲ್ಲಿ ತನಿಖೆ ಮಾಡಿದ್ರೂ ಸಹ ಆರೋಪಿಗಳು ಮಾತ್ರ ಇಂದಿಗು ಸಹ ಪತ್ತೆಯಾಗಿಲ್ಲ.. ಇದ್ರಿಂದ ಪೊಲೀಸರು ಸೀ ರಿಪೋರ್ಟ್ ನನ್ನು ಕೋರ್ಟ್ಗೆ ಸಲ್ಲಿಸಿದ್ರು.. ಯಾವುದೇ ಆಧಾರ ಸಿಗುತ್ತಿಲ್ಲವೆಂದು ಕೋರ್ಟ್ ಗೆ ಸೀ ರಿಪೋರ್ಟ್ ನೀಡಿದ್ಧಾರೆ.. ಒಟ್ಟಿನಲ್ಲಿ ವರ್ಷಗಳು ಕಳೆಯುತ್ತಾ ಬಂದರು ಸಹ ಆ ಕೇಸ್ ಮಾತ್ರ ನಿಗೂಢವಾಗಿಯೇ ಉಳಿದಿರೋದು ನಿಜಕ್ಕೂ ಅಯೋಮಯ.