ವಿದೇಶ

ಈ ದೇಶದಲ್ಲಿದೆ ಕೋಳಿಯಾಕಾರದ ಹೋಟೆಲ್​​​​, ಈ ಹೋಟೆಲ್​ನ ವಿಶೇಷತೆ ಏನು ಗೊತ್ತಾ..?

ಈ ದೈತ್ಯಾಕಾರದ ಕೋಳಿಯ ಹೊಟ್ಟೆಯೊಳಗಿದ್ಯಂತೆ 15 ರೂಂಗಳು..

ಇಲ್ಲಿ ನೋಡಿ… ಬೆಟ್ಟದ ಬುಡದಲ್ಲಿ ದೊಡ್ಡ ಕೋಳಿಯೊಂದು ನಿಂತಿದೆ. ಇಷ್ಟು ದೊಡ್ಡ ಕೋಳಿ ಇಲ್ಲಿ ಏನು ಮಾಡ್ತಿದೆ. ಇದರ ಮುಂದೆ ಜನರನ್ನ ಬಿಡಿ ಅಕ್ಕ ಪಕ್ಕ ಇರೋ ಬಿಲ್ಡಿಂಗ್ಗಳು ಸಹ ಚಿಕ್ಕದಾಗಿ ಕಾಣ್ತಿವೆ ಅನ್ನೋ ಪ್ರಶ್ನೆ ಏಳುತ್ತೆ. ಆದರೆ ಇಲ್ಲೇ ಇರೋದು ನೋಡಿ ವಿಶೇಷ. ಇದು ಸಾಮಾನ್ಯ ಕೋಳಿಯಲ್ಲ… ಇದು ದೈತ್ಯಾಕಾರದ ಕೋಳಿ… ಕೋಳಿ ಅಂದರೆ ಸಾಮಾನ್ಯ ಕೋಳಿಯಲ್ಲ… ಕೋಳಿಯಾಕಾರದ ಹೋಟೆಲ್… ಹೌದು ಇದು ಕೋಳಿಯ ಆಕಾರದಲ್ಲಿರೋ ಹೋಟೆಲ್…
ಸಾಮಾನ್ಯವಾಗಿ ಕೋಳಿಯಾಕಾರದ ಪ್ರತಿಮೆಯನ್ನ ನೀವು ನೋಡಿರ್ಬಹುದು. ಆದರೆ ಫಿಲಿಪೀನ್ಸ್ನ ಕ್ಯಾಂಪೆಸ್ಟೋಹನ್-ಹೈಲ್ಯಾಂಡ್-ರೆಸಾರ್ಟ್ ನಲ್ಲಿ ದೊಡ್ಡ ಕೋಳಿ ಜನರನ್ನ ಸೆಳೀತಿದೆ. ಇದನ್ನ ನೋಡೋಕೆ ಅಂತಾನೇ ದಿನಾ ಸಾವಿರಾರು ಜನ ರೆಸಾರ್ಟ್ಗೆ ಹೋಗ್ತಿದಾರಂತೆ. ಇಷ್ಟು ಫೇಮಸ್ ಆಗಿರೋ ಈ ಹೋಟೆಲ್ ಈಗ ಗಿನ್ನಿಸ್ ದಾಖಲೆಗೂ ಸೇರಿದೆ.


ಇನ್ನು ಈ ಕೋಳಿ 114 ಅಡಿ ಎತ್ತರ, 39 ಅಡಿ ಅಗಲ ಮತ್ತು 92 ಅಡಿ ಉದ್ದ ಇದೆಯಂತೆ. ಇಷ್ಟು ದೊಡ್ಡ ಕೋಳಿಯನ್ನ ನಿರ್ಮಿಸೋಕೆ ಬರೋಬ್ಬರಿ 456 ದಿನ ಬೇಕಾಗಿದೆ. ಈ ಕೋಳಿ ಕೇವಲ ಹೊರಗಿನಿಂದ ನೋಡೋಕೆ ಮಾತ್ರ ಚೆಂದ ಇಲ್ಲ. ಇದರ ಹೊಟ್ಟೆಯೊಳಗೆ ಹೋಟೆಲ್ ಸಹ ಇದೆ. ಹೌದು ಈ ದೈತ್ಯಾಕಾರದ ಕೋಳಿಯ ಹೊಟ್ಟೆಯೊಳಗೆ 15 ರೂಂಗಳಿವೆ. ಈ ರೂಂಗಳೇನು ಚಿಕ್ಕದಿಲ್ಲ. ಸಾಕಷ್ಟು ದೊಡ್ಡದಾಗಿರೋ ಈ ರೂಂಗಳ ಒಳಗೆ ದೊಡ್ಡ ಬೆಡ್, ಟಿವಿ ಸೇರಿ ಎಲ್ಲಾ ಆಧುನಿಕ ಸೌಲಭ್ಯಗಳೂ ಇವೆ. 
ಈ ದೈತ್ಯ ಕೋಳಿ ಹೋಟೆಲ್ ಇರೋದು  ಕ್ಯಾಂಪೆಸ್ಟೋಹನ್-ಹೈಲ್ಯಾಂಡ್-ರೆಸಾರ್ಟ್ ನಲ್ಲಿ. ಇಲ್ಲಿ ಇಂತಹ ಸಾಕಷ್ಟು ಆಕರ್ಷಣೆಗಳೂ ಸಹ ಇವೆ ಅಂತಾರೆ ಈ ಹೋಟೆಲ್ ನಿರ್ಮಾಣದ ಹಿಂದಿರೋ ಮಾಸ್ಟರ್ಮೈಂಡ್…