ಸ್ಪೆಷಲ್ ಸ್ಟೋರಿ

ಬಿಗ್‌ ಮನೆಯಲ್ಲಿ ಊಟದ ವಿಚಾರಕ್ಕೆ ಜೋರು ಜಗಳ

ಬಿಗ್‌ ಬಾಸ್‌ನಲ್ಲಿ ಐಶ್ವರ್ಯ, ಗೋಲ್ಡ್‌ ಸುರೇಶ್‌ ಹಾಗೂ ಉಗ್ರಂ ಮಂಜು ನಡುವೆ ಊಟದ ವಿಚಾರಕ್ಕೆ ಜೋರು ಜಗಳ ಶುರುವಾಗಿದೆ..

ಸ್ನೇಹಿತರೇ ಕನ್ನಡದ ಬಿಗ್‌ ಬಾಸ್‌ ಸೀಸನ್‌ 11ರ ಸೋಮುವಾರದ ಎಪಿಸೋಡ್‌ನಲ್ಲಿ ಊಟದ ವಿಚಾರಕ್ಕೆ ಜೋರು ಜಗಳ ಶುರುವಾಗಿದೆ, ದಿನಕಳೆದಂತೆ ಬಿಗ್‌ ಮನೆಯಲ್ಲಿ ಮನೆ ಮಂದಿ ಮಧ್ಯೆ ಸಣ್ಣ ಪುಟ್ಟ ಮನಸ್ತಾಪಗಳು ಶುರುವಾಗೋದು ಸರ್ವೇ ಸಾಮಾನ್ಯ, ಅದೇ ರೀತಿ ಇಲ್ಲಿಯೂ ಕೂಡಾ ಐಶ್ವರ್ಯ, ಗೋಲ್ಡ್‌ ಸುರೇಶ್‌ ಹಾಗೂ ಉಗ್ರಂ ಮಂಜು ಮಧ್ಯೆ ಊಟದ ವಿಚಾರಕ್ಕೆ ಜಗಳ ಶುರುವಾಗಿದೆ, ಕಾರಣ ಇಷ್ಟೇ ಐಶ್ವರ್ಯ ಊಟ ಬಡಿಸಿಕೊಳ್ಳಲು ಮುಂದಾಗ್ತಾರೆ, ಅದಾಗ್ಲೆ ಒಮ್ಮೆ ತಟ್ಟೆಯಲ್ಲಿ ಬಡಿಸಿಕೊಂಡು ಊಟ ಮಾಡಿ ಮತ್ತೊಂದು ಬಾರಿ ಬಡಿಸಿಕೊಳ್ಳೋದಕ್ಕೆ ಮುಂದಾದಾಗ ಗೋಲ್ಡ್‌ ಸುರೇಶ್‌ ಒಂಚೂರು ನೋಡಿಕೊಂಡು ಬಡಿಸಿಕೊಳ್ಳಿ ಇನ್ನೂ ಏಳು ಜನ ಊಟ ಮಾಡೋದು ಬಾಕಿ ಇದೆ ಅಂತಾ ಹೇಳಿದ್ರು, ಇದಕ್ಕೆ ಕೆರಳಿದ ಐಶ್ವರ್ಯ ನಾನು ಊಟ ಮಾಡೋದೇ ಕಮ್ಮಿ ನೀವು ನನಗೆ ಹೇಳೋದಕ್ಕೆ ಬರಬೇಡಿ ನನಗೆ ಬರಬೇಕಾದದ್ದನ್ನ ನಾನು ಬಡಿಸಿಕೊಂಡಿದ್ದೀನಿ ಅಂತಾ ಹೇಳ್ತಾರೆ, ಇವರಿಬ್ಬರ ಜಗಳ ಶುರುವಾಗುತ್ತಿದ್ದಂತೆ ಮಧ್ಯೆ ಬಂದ ಉಗ್ರಂ ಮಂಜು ಊಟದ ವಿಚಾರಕ್ಕೆ ಈ ರೀತಿ ಮಾತನಾಡುವುದು ತಪ್ಪು, ಹಾಕೊಂಡ್ರೆ ಏನ್‌ ತಪ್ಪಿದೆ, ನೀನು ಯಾವತ್ತೂ ಜಾಸ್ತಿ ಹಾಕೊಂಡಿಲ್ವಾ ಎಂದು ಪ್ರಶ್ನೆ ಮಾಡ್ತಾರೆ, ಇಲ್ಲಿಂದಲೇ ಮಾತಿಗೆ ಮಾತು ಬೆಳೆದು ಅದು ಮನಸ್ತಾಪಗಳಿಗೆ ತಿರುಗಿಬಿಡುತ್ತೆ..