ಈ ಸಾವು ಅನ್ನೋದೇ ಹಾಗೆ, ಎಲ್ಲಿ..? ಯಾವಾಗ..? ಹೇಗೆ ಬಂದೆರಗಿ ಬಿಡತ್ತೋ ಹೇಳೋದಕ್ಕೆ ಸಾಧ್ಯವೇ ಇಲ್ಲ, ಹೌದು ಅವರೆಲ್ಲಾ ವಿದ್ಯಾರ್ಥಿಗಳು ಮೂಲತಃ ನಮ್ಮ ಮೈಸೂರಿನ ಹೆಣ್ಣು ಮಕ್ಕಳು ಟ್ರಿಪ್ಗೆ ಅಂತೇಳಿ ಮನೆಯಿಂದ ಹೊರಟವರು ಹೋಗಿದ್ದು ಸಾವಿನ ಮನೆಗೆ ಹೌದು, ಮಂಗಳೂರಿನ ಖಾಸಗಿ ರೆಸಾರ್ಟ್ಗೆ ಹೋದ ಮೂವರು ಹೆಣ್ಣು ಮಕ್ಕಳು ದಾರುಣ ಅಂತ್ಯ ಕಂಡಿದ್ದಾರೆ, ಅಷ್ಟಕ್ಕೂ ಆಗಿದ್ದಾದ್ರೂ ಏನು ಅಂತೀರಾ..?
ಮಂಗಳೂರಿನ ಖಾಸಗಿ ರೆಸಾರ್ಟ್ಗೆ ಬಂದಿದ್ದ ಮೂರ ಜನ ಯುವತಿಯರು ರೆಸಾರ್ಟ್ನ ಈಜು ಕೊಳದಲ್ಲಿ ಆಟವಾಡಲು ಹೋಗಿದ್ದಾರೆ, ಈ ವೇಳೆ ರೆಸಾರ್ಟ್ ಸಿಬ್ಬಂದಿ ಯಾರೊಬ್ಬರೂ ಕೂಡಾ ಆ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ, ಈ ವೇಳೆ ಈಜುಕೊಳಕ್ಕಿಳಿದ ಮೂವರು ಯುವತಿಯರು ಆಟವಾಡುತ್ತಾ ಮೈ ಮರೆತಿದ್ರು ಇದೇ ವೇಳೆ ಒಬ್ಬ ಯುವತಿ ಈಜಿಕೊಂಡು ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗೋದಕ್ಕೆ ಪ್ರಯತ್ನ ಪಡ್ತಾಳೆ, ಆದ್ರೆ ಅವಳಿಗೆ ಗೊತ್ತಿಲ್ಲ, ಅಲ್ಲಿ ಆಳ ಜಾಸ್ತಿ ಇದೆ ಅಂತಾ, ಸರಿಸುಮಾರು ಆರು ಅಡಿ ಆಳದ ಕಡೆ ಹೊರಟಾಗ, ಈಜು ಬರದ ಯುವತಿ ನೀರಲ್ಲಿ ಮುಳುಗಿದ್ದಾಳೆ, ಇದನ್ನ ನೋಡಿದ ಮತ್ತೊಬ್ಬ ಯುವತಿ ಆಕೆಯ ರಕ್ಷಣೆಗೆ ಮುಂದಾಗಿದ್ದಾಳೆ, ಈ ವೇಳೆ ಆಕೆಯೂ ಕೂಡಾ ಮುಳುಗಿದ್ದಾಳೆ, ಇಬ್ಬರು ಮುಳುಗುತ್ತಿದದ್ದನ್ನ ನೋಡಿದ ಮತ್ತೊಬ್ಬ ಹುಡುಗಿಗೆ ಹೇಗಾಗಿರಬೇಕು, ತನ್ನ ಸ್ನೇಹಿತರನ್ನ ಉಳಿಸಲೇಬೇಕು ಅಂತೇಳಿ ಆಕೆಯೂ ಕೂಡಾ ಆಳದ ಜಾಗಕ್ಕೆ ಹೋಗ್ತಾಳೆ ಅಷ್ಟೇ ಆಳದ ಜಾಗದಲ್ಲಿ ಈಜಾಡೋದಕ್ಕೆ ಆಗದೆ, ಮೂವರು ಯುವತಿಯರು ಸಾವನ್ನಪ್ಪಿದ್ದಾರೆ, ಈ ದಾರುಣ ದೃಶ್ಯ ರೆಸಾರ್ಟ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರ ಕೈ ಸೇರಿದೆ
ಮಂಗಳೂರಿನ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಕೇಸ್ ಸಂಬಂಧ ಇಬ್ಬರನ್ನ ಬಂಧಿಸಲಾಗಿದೆ.. ನಿರ್ಲಕ್ಷ್ಯ ಆರೋಪದ ಮೇಲೆ ರೆಸಾರ್ಟ್ ಓನರ್, ಹಾಗೂ ರೆಸಾರ್ಟ್ನ ಮ್ಯಾನೇಜರ್ ಅರೆಸ್ಟ್ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ..