ಸ್ಪೆಷಲ್ ಸ್ಟೋರಿ

ಲಾಯರ್ ಜಗದೀಶ್ ರೀತಿ ಬಿಗ್ ಮನೆಯಿಂದ ಔಟ್ ಆಗ್ತಾರಾ ರಜತ್..?

ಬಿಗ್ ಮನೆಯಲ್ಲಿ ಈ ವಾರ ಸಡೇ, ಉರಿ, ಹಾಗೂ ಬೀಪ್ ಮಾತುಗಳೇ ಹೆಚ್ಚಾಗಿತ್ತು,,

ಬಿಗ್ ಮನೆಯಲ್ಲಿ ಈ ವಾರ ಸಡೇ, ಉರಿ, ಹಾಗೂ ಬೀಪ್ ಮಾತುಗಳೇ ಹೆಚ್ಚಾಗಿತ್ತು, ಅಷ್ಟಕ್ಕೂ ಈ ಮಾತುಗಳನ್ನ ಆಡಿದ್ದು 50 ದಿನಗಳ ಸನಿಹದಲ್ಲಿದ್ದಾಗ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಪುರುಷ ಸದಸ್ಯ ರಜತ್, ರಜತ್ ಬಿಗ್ ಬಾಸ್ ಮನೆಗೆ ಯಾವಾಗ ಎಂಟ್ರಿ ಕೊಟ್ರೋ, ಬಿಗ್ ಮನೆಯ ಲೆಕ್ಕಾಚಾರವೇ ಬೇರೆಯಾಗಿತ್ತು, ಅದ್ರಲ್ಲೂ ಮಂಜು ಅಂತು, ಏನ್ ಗುರು ಇದು ನಾವು 50 ದಿನ ಆಡಿದ್ದು, ಇವನ್ಯಾರೋ ಬಂದ್ನಲ್ಲ ಅಂತೇಳಿ, ಒಗ್ಗಟ್ಟಿನ ಮಂತ್ರ ಜಪಿಸಿದ್ರು, ಸುದೀಪ್ ಅವರ ಮುಂದೆ ನಿಂತು ಈ ಮನೆಯಲ್ಲಿ ಇರೋರೆಲ್ಲಾ ಅರ್ಧ ಪುಕ್ಲು ಅರ್ಧ ತಿಕ್ಲು ಅಂದಾಗ್ಲೆ ಅರ್ಥವಾಗಿತ್ತು, ರಜತ್ ಲಾಯರ್ ಜಗದೀಶ್ ರೀತಿ ಅಗ್ರೆಸೀವ್ ಪ್ಲೇಯರ್ ಅಂತಾ..
ಇನ್ನು ರಜತ್, ಮನೆಗೆ ಕಾಲಿಡುತ್ತಿದ್ದಂತೆ ಟಾರ್ಗೆಟ್ ಮಾಡಿದ್ದೇ ಬಿಗ್ ಮನೆಯ ಸ್ಟ್ರಾಂಗ್ ಪ್ಲೇಯರ್ ಅಂತಾ ಕರೆಸಿಕೊಳ್ಳೋ ತ್ರಿವಿಕ್ರಮ್ ಮೇಲೆ, ಆಟ ಅಂತಾ ಬಂದ್ರೆ ಇಲ್ಲಿ ರಜತ್ ಯಾರಿಗೂ ಕಮ್ಮಿ ಇಲ್ಲ, ಆದ್ರೆ ಇಲ್ಲಿ ತಪ್ಪಾಗಿದ್ದು ರಜತ್ ಬಾಯ್ಬಿಟ್ರೆ ಅವಾಚ್ಯ ಶಬ್ದಗಳನ್ನ ಬಳಸುತ್ತಾರೆ ಅನ್ನೋದು ಮನೆ ಮಂದಿಯ ಮಾತು, ನೀವು ಪರಿಸ್ಥಿತಿಯನ್ನ ಹ್ಯಾಂಡಲ್ ಮಾಡ್ತಿರೋದು ಸರಿಯಲ್ಲಾ ಅಂತೇಳಿ, ಬಿಗ್ ಮಂದಿ ರಜತ್ಗೆ ಕಳಪೆ ಪಟ್ಟ ಕಟ್ಟಿದ್ದು ನೀವು ನೋಡೇ ಇರ್ತೀರಾ, ಈಗ ಮಾತು ಅದಲ್ಲಾ ರಜತ್ ತಮ್ಮ ಮಾತಿನ ಬರದಲ್ಲಿ ಬಿಗ್ ಮನೆಯಲ್ಲಿ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ, ಈ ಸೀಸನ್ನಲ್ಲಿ ಲಾಯರ್ ಜಗದೀಶ್ ಕೂಡಾ ಮಹಿಳಾ ಕಂಟೆಸ್ಟೆಂಟ್ಗಳಿಗೆ ಅವಾಚ್ಯ ಶಬ್ದಗಳನ್ನ ಬಳಸಿದ್ದಕ್ಕೆ ಅವರನ್ನ ಮನೆಯಿಂದ ಹೊರದಬ್ಬಲಾಯ್ತು, ಈಗ ರಜತ್ ಕೂಡಾ ಅವಾಚ್ಯ ಶಬ್ದಗಳನ್ನ ಬಿಗ್ ಮನೆಯಲ್ಲಿ ಬಳಸಿದ್ದಾರೆ, ಅವರನ್ನ ಕೂಡಾ ಮನೆಯಿಂದ ಹೊರ ಹಾಕ್ತಾರಾ, ಗೊತ್ತಿಲ್ಲಾ, ಇದಕ್ಕೆಲ್ಲಾ ಉತ್ತರ ಸಿಗ್ಬೇಕು ಅಂದ್ರೆ ಶನಿವಾರ ಮತ್ತು ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ರವರೇ ಹೇಳಬೇಕಿದೆ..