ಈಗಿರುವ ಕೆಲಸದ ಟೈಂನಲ್ಲೇ ಊಟ, ತಿಂಡಿ ಮಾಡೋಕೆ ಸಮಯ ಸಿಗ್ತಿಲ್ಲ ಅನ್ನೋರೇ ಜಾಸ್ತಿ. ವರ್ಕ್ ಫ್ರೆಷನ್ ಮಧ್ಯೆ ಕುಟುಂಬಕ್ಕೆ ಟೈಮ್ ಮೀಸಲಿಡೋದು ಯಾವಾಗ..? ವರ್ಕ್.. ವರ್ಕ್ ಎನ್ನುವ ಒತ್ತಡದ ಜೀವನ ಸಾಕಪ್ಪ ಸಾಕು. ಅನ್ನೋ ಉದ್ಯೋಗಿಗಳೇ ತುಂಬಿದ್ದಾರೆ. ಆದ್ರೆ ಈ ನಡುವೆ ಅನೇಕ ಉದ್ಯಮಿಗಳು ಕೆಲಸದ ಸಮಯವನ್ನು ಹೆಚ್ಚಿಸಬೇಕು ಎನ್ನುವ ಒತ್ತಾಯವನ್ನೂ ಮಾಡ್ತಿದ್ದಾರೆ. ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕು ಅನ್ನೋ ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆ ನಡುವೆ ಇದೀಗ ಎಲ್ & ಟಿ ಕಂಪನಿಯ ಅಧ್ಯಕ್ಷರಾದ ಎಸ್.ಎನ್. ಸುಬ್ರಮಣಿಯನ್, 90 ಗಂಟೆ ಕೆಲಸ ಮಾಡುವ ಬಗ್ಗೆ ಶಾಂಕಿಂಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.

ಭಾರತದ ಯುವ ಸಮುದಾಯ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಇನ್ಫೋಸಿಸ್ ನಾರಾಯಣಮೂರ್ತಿ ಅವರ ವಾದಕ್ಕೆ ಈಗಾಗಲೇ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ L & T ಛೇರ್ಮನ್ ಸುಬ್ರಮಣಿಯನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಅನ್ನೋ ವಾದ ಮಂಡಿಸಿದ್ದಾರೆ.

ಮನೆಯಲ್ಲಿ ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ಕೊಂಡು ಇರ್ತೀರಿ. ಕಚೇರಿಗೆ ಬಂದು ಕೆಲಸ ಮಾಡಿ, ಆಗ ಮಾತ್ರ ಜೀವನದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಯಲು ಸಾಧ್ಯ ಉದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ. ಅಷ್ಟು ಮಾತ್ರವಲ್ಲ, ಉದ್ಯೋಗಿಗಳು ಶನಿವಾರದ ಜೊತೆಗೆ ಭಾನುವಾರವೂ ಕೆಲಸ ಮಾಡಬೇಕು ಎಂದಿದ್ದಾರೆ. ಐಟಿ ಕಂಪನಿಗಳು ಸೇರಿ ದೊಡ್ಡ ಸಂಸ್ಥೆಗಳು, ಉದ್ಯೋಗಿಗಳಿಗೆ ವಾರಕ್ಕೆ 2 ದಿನ ವೀಕ್‌ಆಫ್ ಕೊಡ್ತಿವಿ. ಆದರೆ ವಾರಕ್ಕೆ 6 ದಿನ ಕೆಲಸ ಮಾಡಿಸುವ ಸಂಸ್ಥೆಗಳಲ್ಲಿ L & T ಕೂಡ ಒಂದು. ಹೀಗಿರುವಾಗ ಉದ್ಯೋಗಿಗಳ ಜೊತೆಗಿನ ಸಂವಾದದ ವೇಳೆ ಸುಬ್ರಮಣಿಯನ್ ಅಭಿಪ್ರಾಯ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.. ವಾರಕ್ಕೆ 6 ದಿನ ಅಲ್ಲ, 7 ದಿನವೂ ಕೆಲಸ ಮಾಡ್ಬೇಕು. ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗ್ತಿಲ್ಲ ಅನ್ನೋ ನೋವಿದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ನೀವೂ ಕೂಡ ಭಾನುವಾರ ಕೆಲಸ ಮಾಡಿದರೆ ನನಗೆ ಹೆಚ್ಚು ಖುಷಿಯಾಗುತ್ತೆ ಎಂದಿದ್ದಾರೆ.

ಇನ್ನು 90 ಗಂಟೆ ಕೆಲಸ ಮಾಡ್ಬೇಕು ಅನ್ನೋ ತಮ್ಮ ಅಭಿಪ್ರಾಯಕ್ಕೆ L & T ಛೇರ್ಮನ್ ಸುಬ್ರಮಣಿಯನ್ ಚೀನಿಯರ ಉದಾಹರಣೆ ಕೊಟ್ಟಿದ್ದಾರೆ. ಚೀನಾದವರು ವಾರದಲ್ಲಿ 90 ಗಂಟೆ ಕೆಲಸ ಮಾಡುತ್ತಾರೆ. ಹೀಗಾಗಿಯೇ ಆ ದೇಶ ವೇಗದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದಿದ್ದಾರೆ.

ಉದ್ಯೋಗಿಗಳ ಕೆಲಸದ ಅವಧಿ ಬಗ್ಗೆ ದಿನದಿಂದ ದಿನಕ್ಕೆ ಚರ್ಚೆ ನಡೆಯುತ್ತಲೇ ಇದೆ. ಈಗಾಗಲೇ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ 70 ಗಂಟೆ ಕೆಲಸದ ಹೇಳಿಕೆಗೆ ದೇಶಾದ್ಯಂತೆ ವಿರೋಧ ವ್ಯಕ್ತವಾಗಿತ್ತು. ಈಗ ಸುಬ್ರಮಣಿಯನ್ ಹೇಳಿಕೆಯ ಬಗ್ಗೆ ಚರ್ಚೆಯಾಗ್ತಿದೆ.